(ಜನಧ್ವನಿ): ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್ ಮುಖಾಂತರ ದೈನಂದಿನವೂ ಹದೀಸ್ ವಚನಗಳನ್ನು, ಇಸ್ಲಾಮಿಕ್ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ. ಇದರ ಅಧೀನದಲ್ಲಿ ಇಸ್ಲಾಮಿಕ್ ವಿಷಯಗಳಿಗೆ ಸಂಬಂಧಿಸಿದಂತೆ, ನಾವು ಕಲಿತ ವಿಷಯಗಳನ್ನು ಪುನಃ ನೆನಪಿಸುವ ಉದ್ದೇಶದಿಂದ ಇಸ್ಲಾಮಿಕ್ ಕ್ವಿಝ್ ಪ್ರೋಗ್ರಾಂ ಆಯೋಜಿಸಲಾಗಿತ್ತು.
ವಾಟ್ಸಾಪ್‌ನ ಸ್ಟೇಟಸ್ ಮುಖಾಂತರ ವಿಭಿನ್ನ ಶೈಲಿಯಲ್ಲಿ ನಡೆದ ಕ್ವಿಝ್ ಕಾರ್ಯಕ್ರಮವು ಖುರ್‌ಆನ್, ಫಿಕ್ಹ್ , ಚರಿತ್ರೆಗಳಿಗೆ ಸಂಬಂಧಿಸಿದ ಜೀವನದಲ್ಲಿ ಉಪಕಾರವಾಗುವಂತಹ ಪ್ರಶ್ನೆಗಳನ್ನು ಒಳಗೊಂಡಿದ್ದವು. ವಾಟ್ಸಾಪ್ ಮುಖಾಂತರ ನಡೆಯುವ ಕ್ವಿಝ್ ಆಗಿದ್ದರೂ, ಇನ್ನಷ್ಟು ಜನರಿಗೆ ತಲುಪಿಸುವ ಸಲುವಾಗಿ ಫೇಸ್‌ಬುಕ್ ಪೇಜ್ ಮತ್ತು Instagramನಲ್ಲೂ ಹಾಕಲಾಗುತ್ತಿತ್ತು.
ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್’ನ ಎರಡನೇ ಭಾರಿ ನಡೆದ ಕ್ವಿಝ್ ಕಾರ್ಯಕ್ರಮದ ಪ್ರಯತ್ನವು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿದ್ದಲ್ಲದೇ, ತುಂಬಾ ಜನರಿಗೆ ಧಾರ್ಮಿಕ ಅರಿವು ಮೂಡಿಸಲು ದಾರಿ ಮಾಡಿಕೊಟ್ಟಿತು. ವಿಜೇತರಿಗೆ ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್‌ನ ಪ್ರಶಸ್ತಿ ಪತ್ರ, ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ.
ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್ ಆಯೋಜಿಸಿರುವ ಇಸ್ಲಾಮಿಕ್ ಕ್ವಿಝ್‌ನಲ್ಲಿ ವಿಜೇತರಾದವರು,
ಪ್ರಥಮ-
ಉಮರ್ ಕುಪ್ಪೆಟ್ಟಿ ಮತ್ತು ಮಿಕ್ದಾದ್ ಉಪ್ಪಿನಂಗಡಿ.
ದ್ವಿತೀಯ-
ಶರೀಫ್ ಸೆಮ್ಮಿ ಪಾನೆಲ, ಇಮಾಝ್ ಮುಡಿಪು ಮತ್ತು ಅಬ್ಬಾಸ್ ಆತೂರ್

ಶಮೀರ್ ಸುಳ್ಯ, ಮುಹಮ್ಮದ್ ಸುಳ್ಯ, ಅನ್ಸಾರ್ ಸೈದು, ಸಫ್ವಾನ್ ಮಾಗುಂಡಿ, ಝಿಯಾದ್ ಮಣಿಪುರ, ಹುಸೇನ್ ಇನೋಳಿ, ದಾವೂದ್ ಹಕೀಮ್ ಗೇರುಕಟ್ಟೆ ಮತ್ತು ಫಾತಿಮಾ ಝೈನಬ್

ವರದಿ: ಅಡ್ಮಿನ್ ವಿಭಾಗ-
ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್






