janadhvani

Kannada Online News Paper

ಕೆಸಿಎಫ್ ಸೌದಿ ಅರೇಬಿಯಾ ಶಿಕ್ಷಣ ಇಲಾಖೆಯಿಂದ ಹಿಫ್ಲ್ ಕೋರ್ಸ್ ಉಧ್ಘಾಟನೆ

ರಿಯಾದ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಕಾರ್ಯಕರ್ತರಿಗೋಸ್ಕರ 45ದಿನಗಳ ಖುರ್ಆನ್ ಹಿಫ್ಲ್ ಕೋರ್ಸನ್ನು ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ರವರು ಉಧ್ಘಾಟಿಸಿದರು.

ಕೆಸಿಫ್ ಸೌದಿ ಅರೇಬಿಯಾ ನ್ಯಾಶನಲ್ ಸಮಿತಿ ಅಧ್ಯಕ್ಷರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಮಾತನಾಡಿ ಹಲವಾರು ಸಮಾಜಮುಖಿ ಸೇವೆಗಳನ್ನು, ಸಾಂತ್ವನ ಸೇವೆಗಳನ್ನು ಮಾಡುತ್ತಾ ಬರುತ್ತಿರುವ ಈ ಸಂಘಟನೆಯು ಇದೀಗ ಕಾರ್ಯಕರ್ತರನ್ನು ಧಾರ್ಮಿಕ ಹಾಗೂ ಭೌತಿಕವಾಗಿ ಬೆಳೆಸುವ ಸಲುವಾಗಿ ಸೌದಿ ಅರೇಬಿಯಾದಾದ್ಯಂತ ಕಾರ್ಯಕರ್ತರನ್ನು ಒಗ್ಗೂಡಿಸಿ ಈ ಯೋಜನೆಕೈಗೊಂಡಿದ್ದು, ನೀರಿಕ್ಷೆಗಿಂತ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಉತ್ಸಾಹದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿ ಮಹತ್ತಪೂರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನಂತರ ಮಾತನಾಡಿದ ಕೆಸಿಎಫ್ ಸೌದಿ ಅರೇಬಿಯಾ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿಯವರು ಕಳೆದ ಏಳು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಈ ಸಂಘಟನೆಯೂ, ಉಪಜೀವನಕ್ಕೊಸ್ಕರ ಕೊಲ್ಲಿರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸುನ್ನೀ ಮುಸ್ಲಿಂ ಕನ್ನಡಿಗರ ಸರ್ವಾಂಗೀನ ಏಳಿಗೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಿಸುವಂತಹ ಪ್ರಸ್ತುತ ಸಂಘಟನೆಯು ಆದರ್ಶ ಧೀರರಂತಹ ಸಹಸ್ರಾರು ಕಾರ್ಯಕರ್ತರನ್ನು ತನ್ನ ಒಡಳಲ್ಲಿರಿಸಿಕೊಂಡು, ವೈವಿಧ್ಯಮಯ ಕಾರ್ಯವೈಖರಿಯಿಂದ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಲ್ಪಡುತ್ತಿರುವ ಸಂಘಟನೆಯಾಗಿದೆ ಕೆಸಿಎಫ್. ಗಲ್ಫ್ ಇಶಾರ ಎಂಬ ಮಾಸ ಪತ್ರಿಕೆ ಮೂಲಕ ಕನ್ನಡದ ಕಂಪನ್ನು ಸಾಗರದಾಚೆಗೂ ಪಸರಿಸುವಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ ಸಂಘಟನೆಯೂ, ತಮ್ಮ ಕಾರ್ಯಕರ್ತರನ್ನು ಧಾರ್ಮಿಕ ಪ್ರಜ್ಞೆಯುಳ್ಳ, ಸಮಾಜಮುಖಿ ಚಿಂತನೆಯುಳ್ಳ ಸತ್ಪ್ರಜೆಗಳನ್ನಾಗಿ ಬೆಳೆಸುವುದರೊಂದಿಗೆ ಅಸಹಾಯಕರಿಗೆ ಅಶಾಕಿರಣವಾಗಿ ಬೆಳೆದು ನಿಂತಿದೆ ಎಂದು ಹೇಳಿದರು. ಲಾಕ್ಡೌನ್ ಬಿಡುವಿನ ವೇಳೆಯನ್ನು ಕಾರ್ಯಕರ್ತರಿಗೆ ಸದುಪಯೋಗಪಡಿಸುವ ಉದ್ದೇಶದಲ್ಲಿ ಕೆಸಿಎಫ್ ಶಿಕ್ಷಣ ಇಲಾಖೆಯ ಮೂಲಕ ಪವಿತ್ರ ಖುರ್ಆನಿನ ಎರಡು ಅಧ್ಯಾಯಗಳನ್ನು ಕಂಠಪಾಠಗೊಳಿಸುವ ವಿಶೇಷವಾದ ಯೋಜನೆಯಾಗಿದೆ ಇದು ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅಸ್ಸುಫ್ಫ ಎಂಬ ದರ್ಸ್ ಸಿಸ್ಟಮಿನ ಮೂಲಕ, ನುರಿತ ಅಧ್ಯಾಪಕರ ಸಹಕಾರದಲ್ಲಿ ಸುಮಾರು ನಲವತ್ತೈದು ದಿನಗಳಲ್ಲಿ ವ್ಯವಸ್ಥಿತವಾಗಿ ಸೂರತುಲ್ ಮುಲ್ಕ್ ಮತ್ತು ಸೂರತುಲ್ ವಾಖಿಅಃ ಎಂಬ ಪವಿತ್ರ ಖುರ್ಆನಿನ ಎರಡು ಅಧ್ಯಾಯಗಳನ್ನು ಕಂಠಪಾಠಗೊಳಿಸುವ ಯೋಜನೆಯಾಗಿದೆ ಎಂದು ವಿವರಿಸಿ ಹೇಳಿದರು.

ನಂತರ ಹಾಫಿಲ್ ಸುಲೈಮಾನ್ ಹನೀಫಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ತರಗತಿಯೂ KCF Marjan ಎಂಬ https://www.youtube.com/channel/UCBshQHRdIFbNMtHxCKvlQrg ನಲ್ಲಿ ಪ್ರಸಾರಗೊಳ್ಳಲಿದೆ.

ವರದಿ :ರಿಯಾ ನೆಲ್ಯಾಡಿ

error: Content is protected !! Not allowed copy content from janadhvani.com