janadhvani

Kannada Online News Paper

ಚಂದ್ರದರ್ಶನ: ನಾಳೆ(ಏ.24)ರಂಝಾನ್ ವ್ರತಾಚರಣೆ ಆರಂಭ- ಖಾಝಿ ಖುರ್ರತುಸ್ಸಾದಾತ್ ಘೋಷಣೆ

ಮಂಗಳೂರು: ಪವಿತ್ರ ರಂಝಾನ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಎಪ್ರಿಲ್ 24 ಶುಕ್ರವಾರ ದ.ಕ.ಜಿಲ್ಲೆಯಲ್ಲಿ ರಂಝಾನ್ ಪ್ರಥಮ ದಿನವಾಗಿದೆ ಎಂದು ಉಳ್ಳಾಲ ಹಾಗೂ

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಗಳಾದ, ಖುರ್ರತ್ತುಸ್ಸಾದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್, ಮದನಿ ಅಲ್ ಬುಖಾರಿ ತಿಳಿಸಿದ್ದಾರೆ.


ಅದೇರೀತಿ ಮಂಗಳೂರು ಮತ್ತು ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಹಾಗೂ ಉಡುಪಿ, ಹಾಸನ,ಚಿಕ್ಕಮಗಳೂರು ಜಿಲ್ಲಾ

ಸಂಯುಕ್ತ ಖಾಝಿಗಳಾದ ತಾಜುಲ್ ಫುಖಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರು ಕೂಡಾ ನಾಳೆ ರಂಝಾನ್ ಪ್ರಥಮ ದಿನವಾಗಿದೆ ಎಂದು ಘೋಷಿಸಿದ್ದಾರೆ.


ಸುನ್ನೀ ಸಂಯುಕ್ತ ಮುಸ್ಲಿಮ್ ಜಮಾಅತ್ ದ.ಕ ಜಿಲ್ಲೆ ಪ್ರಕಟಣೆ:

‘ರಮಳಾನ್ ಮಾಸಾರಂಭ’ ಚಂದ್ರದರ್ಶನದ ಆಧಾರದ ಮೇಲೆ 24.04.2020 ಶುಕ್ರವಾರ ರಮಳಾನ್:01 ರಮಳಾನ್ ಮಾಸದ ಪ್ರಾರಂಭವಾಗಿದೆ. ಎಲ್ಲಾ ಮುಸ್ಲಿಮ್ ಬಾಂಧವರು 24.04.2020ರಿಂದ ಉಪವಾಸ ವ್ರತಾಚರಿಸಬೇಕು. ಇಸ್ಲಾಮಿನಲ್ಲಿ ರಮಳಾನ್ ಮಾಸಕ್ಕೆ ಅಪಾರ ಮಹತ್ವವಿದೆ.ಆರಾಧನೆಗಳಿಗೂ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಆದರೆ ಈ ಬಾರಿ ಈ ಕೆಳಗಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

  • •ಸಾಂಕ್ರಾಮಿಕ ರೋಗಗಳ ವ್ಯಾಪಿಸಿದಾಗ ವಹಿಸಬೇಕಾದ ಮುನ್ನೆಚ್ಚರಿಕೆಯ ಇಸ್ಲಾಮಿನ ನಿರ್ದೇಶನ ಹಾಗೂ ಪ್ರವಾದಿ ಮುಹಮ್ಮದ್(ಸ.ಅ)ರ ಬೋಧನೆಯಂತೆ ಎಲ್ಲರೂ ನಮಾಝ್, ಇಅ್’ತಿಕಾಫ್ ಹಾಗೂ ಇತರೆ ಯಾವುದೇ ಆರಾಧನೆಗಳಿಗೆ ಮಸ್ಜಿದ್’ಗಳಿಗೆ ಹೋಗದೆ ಮನೆಯಲ್ಲಿಯೇ ನಿರ್ವಹಿಸುವುದು.
  • •ಮಸ್ಜಿದ್, ಮದರಸ,ಶಿಕ್ಷಣ ಸಂಸ್ಥೆ ಹಾಗೂ ಮನೆಗಳಲ್ಲಿ ಇಫ್ತಾರ್ ಕೂಟಗಳನ್ನು ನಡೆಸದೆ ಮನೆಯಲ್ಲಿಯೇ ಮನೆ-ಮಂದಿ ಮಾತ್ರ ಇಫ್ತಾರ್ ನಡೆಸುವುದು.
  • •ಮಸ್ಜಿದ್,ಮದರಸ ಹಾಗೂ ಮನೆಗಳಲ್ಲಿ ತರಾವೀಹ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸದೆ;ಮನೆಯಲ್ಲಿ ಮನೆ-ಮಂದಿ ಮಾತ್ರ ತರಾವೀಹ್ ನಮಾಝ್ ನಿರ್ವಹಿಸುವುದು •ಅತ್ಯಗತ್ಯಕ್ಕಲ್ಲದೆ ಹೊರಹೋಗದೆ ಮನೆಯಲ್ಲಿಯೇ ಇರುವುದು.
  • •ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ನೀಡುವುದು.
  • •ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸರಕಾರ ಕೈಗೊಳ್ಳುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಸಹಕರಿಸುವುದು.
ಈ ಮೇಲ್ಕಂಡ ಎಲ್ಲಾ ನಿರ್ದೇಶನಗಳನ್ನು ಸಂಬಂಧಿತರು ಗಂಭೀರವಾಗಿ ಪರಿಗಣಿಸಿ, ಪಾಲಿಸಲು,ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಮೂಲಕ ನಿರ್ದೇಶಿಸಲಾಗಿದೆ.

ಇತೀ..
ಖುರ್ರತುಸ್ಸಾದಾತ್|| ಸಯ್ಯಿದ್ ಫಝಲ್ ಮದನಿ ಅಲ್-ಬುಖಾರಿ( ಗೌರವಾನ್ವಿತ ಖಾಝಿಯವರು ಸುನ್ನೀ ಸಂಯುಕ್ತ ಮುಸ್ಲಿಮ್ ಜಮಾಅತ್ ದ.ಕ ಜಿಲ್ಲೆ)
error: Content is protected !! Not allowed copy content from janadhvani.com