ತರಾಟೆಗೆ ತಗೊಂಡು ಎಚ್ಚರಿಕೆಯ ಸಂದೇಶ ರವಾನಿಸಿದ್ದು ರಾಜ ಧರ್ಮದ ಹಾದಿಯಲ್ಲಿ ಸ್ವಾಗತಾರ್ಹ ನಡೆಯಾಗಿದೆ.
ಇವತ್ತು ಕೆಲವೊಂದೂ ಮಾಧ್ಯಮಗಳು ರೋಗದ ಹೆಸರಿನಲ್ಲಿ ಧರ್ಮ ಧರ್ಮಗಳ ಮದ್ಯೆ ಕಂದಕ ಸೃಷ್ಟಿಸುವ ಪ್ರಯತ್ನದಲ್ಲಿ ನಿರತವಾಗಿವೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಕಟ್ಟು ನಿಟ್ಟಿನ ಹೇಳಿಕೆಯು ಭಾವಕ್ಯತೆಯನ್ನು ಸಾರಿದೆ.
ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಬದುಕಿನಲ್ಲಿ ತಪ್ಪದೇ ಭಾಗವಹಿಸುವ ಶುಕ್ರವಾರದ ಪ್ರಾರ್ಥನೆಯನ್ನು ಕೂಡಾ ನಿಲ್ಲಿಸಿ ಮಸೀದಿ ಪ್ರವೇಶವನ್ನೇ ನಿಷೇದಿಸಿವೆ.
ಹಾಗೇನೇ ಸೇವೆ ಮತ್ತು ಸಹಾಯ ಹೇಗೆ ನಡೆಸುತ್ತಿದ್ದಾರೆ ಎಂಬುವುದನ್ನು ಸ್ವತಃ ಮುಖ್ಯಮಂತ್ರಿಯವರೇ ತಿಳಿಸಿದ್ದಾರೆ.
ಕೆಲವೊಂದು ಮಾಧ್ಯಮಗಳು ಎಷ್ಟೇ ಕೋಮು ವರದಿ ಪ್ರಕಟಿಸಿದರೂ ಸೌಹಾರ್ದತೆ ಬಯಸುವ ಉತ್ತಮ ಮಾದ್ಯಮಗಳಿಂದ ಸಮಾಜ ನಿರೀಕ್ಷೆಯಲ್ಲಿವೆ.
ಪ್ರತೇಕವಾಗಿ ಮುಸ್ಲಿಂ ಸಹೋದರರು ಬಡವರಿಗೆ ಕಿಟ್ ವಿತರಿಸುವ ಸಾಹಸ ಸೇವೆಯು ಕೆಲವು ಮಾದ್ಯಮಗಳಿಗೆ ಕಾಣದಿದ್ದರೂ ಇಲ್ಲಿನ ಪ್ರತಿಯೊಬ್ಬ ನಾಗರಿಕರು ಅರಿತುಕೊಂಡಿದ್ದಾರೆ. ಚೀನಾದ ವೂಹಾನಿಂದ ಹರಡಿದ ಈ ರೋಗ ಜಾತಿ ಧರ್ಮ ಗೋತ್ರ ಭಾಷೆ ಕುಳ ಪಂಕ್ತಿ ನೋಡದೆ ಹರಡುತ್ತಿವೆ.
ದೆಹಲಿಯಲ್ಲಿ ಲಾಕ್ ಡೌನ್ ಆಗುವ ಮುನ್ನ ನಡೆದ ಸಭೆಯನ್ನು ಮುಂದಿಟ್ಟು ಅದರಲ್ಲಿ ಧರ್ಮದ ಹೆಸರನ್ನು ಎತ್ತಿಕಟ್ಟಿ ಕೋಮುವರದಿ ಪ್ರಕಟಿಸುವ ಮಾದ್ಯಮಗಳಿಗೆ ನೀತಿ ಪಾಠವನ್ನು ಹೇಳಿಕೊಟ್ಟ ಮುಖ್ಯಮಂತ್ರಿಯ ನಡೆಯನ್ನು ಅಭಿನಂದಿಸುತ್ತೇನೆ.
✍ಇಕ್ಬಾಲ್ ಬಾಳಿಲ
(ಜಿಲ್ಲಾ ಕಾರ್ಯದರ್ಶಿ ಎಸ್ಕೆಎಸ್ಸೆಸ್ಸೆಫ್ ದ.ಕ)