janadhvani

Kannada Online News Paper

ಪ್ರಚೋದನಕಾರಿ ಪೋಸ್ಟ್: ಕ್ರಮ ಕೈಗೊಳ್ಳಬೇಡಿ ಎಂದ ಪುತ್ತೂರು ಶಾಸಕರ ನಡೆ ಖಂಡನೀಯ

ಪ್ರಚೋದನಕಾರಿ ಪೋಸ್ಟ್ ಹಾಕುವ ಸಂಘಪರಿವಾರ ಕಾರ್ಯಕರ್ತರ ಮಾನಸಿಕ ಸ್ಥಿಮಿತವನ್ನು ಪರೀಕ್ಷಿಸಿ ಮನವೊಲಿಸಲು ಪೋಲಿಸ್ ಠಾಣೆಯನ್ನು ಬಳಸುವ ಬದಲು ಸಂಜೀವ ಮಠಂದೂರ್ ಪುತ್ತೂರಿನಲ್ಲಿ ಕೌನ್ಸೆಲಿಂಗ್ ಸೆಂಟರ್ ತೆರೆಯಲಿ: ಸಿದ್ದೀಕ್ ಕೆ.ಎ


ಪುತ್ತೂರು:-ಕೊರೋನಾ ವೈರಸ್ ಹೆಸರಿನಲ್ಲಿ ಇತ್ತೀಚೆಗೆ ಹಲವು ಸಂಘಪರಿವಾರ ಕಾರ್ಯಕರ್ತರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಕೋಮುಪ್ರಚೋದನಕಾರಿ ಪೋಸ್ಟ್ ಹಾಕುತ್ತಿರುವುದನ್ನು ದ.ಕ ಪೋಲಿಸ್ ವರಿಷ್ಠಾದಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲವು ಪ್ರಕರಣ ದಾಖಲು ಮಾಡಿದಲ್ಲದೆ ಇಂತಹ ಪ್ರಕರಣದ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಎಲ್ಲಾ ಠಾಣೆಗಳಿಗೆ ಸುತ್ತೋಲೆ ಕಳುಹಿಸಿದ್ದು ಸ್ವಾಗತಾರ್ಹವಾಗಿದೆ.

ಆದರೆ ಪುತ್ತೂರಿನ ಶಾಸಕರು ಇದಕ್ಕೆ ತದ್ವಿರುದ್ಧವಾಗಿ ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಮಾಡ್ಬೇಡಿ ಹಿಂದುಗಳಿಗೆ ತೊಂದರೆಯಾಗಲು ಬಿಡುವುದಿಲ್ಲ,ಸಾಮಾಜಿಕ ಜಾಲಾತಣದಲ್ಲಿ ಪ್ರಚೋದನಕಾರಿ ಹೇಳಿಕೆ ಹಾಕಿದವರನ್ನು ಠಾಣೆಗೆ ಕರೆಸಿ ಮನವೊಲಿಸಿ ಎಂಬೆಲ್ಲ ರೀತಿಯಲ್ಲಿ ಬೇಜಾವಬ್ದಾರಿ ಹೇಳಿಕೆ ನೀಡಿರುವುದುವ ಸಂವಿಧಾನ ವಿರೋಧಿಯಾಗಿದೆ ಮತ್ತು ಖಂಡನೀಯವಾಗಿದೆ.

ಶಾಸಕರು ಯಾವುದೋ ಸಂಘಟನೆಯ ಹಿನ್ನೆಲೆಯಿಂದ ಬಂದವರಾಗಿರಬಹುದು‌,ಆದರೆ ಶಾಸಕನಾಗಿ ಆಯ್ಕೆಯಾದದ್ದು ಜಾತ್ಯಾತೀತ ದೇಶವಾಗಿರುವ ಭಾರತದ ಸಂವಿಧಾನದ ಹಿನ್ನೆಲೆಯಿಂದ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಜನಪ್ರತಿನಿದಿಗಳು ಯಾವುದಾದರೂ ಒಂದು ಧರ್ಮಕ್ಕೆ ಅಥವಾ ಪಕ್ಷಕ್ಕೆ ಸೀಮಿತವಾಗಿರುವವರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಕಾರ್ಯ ನಿರ್ವಹಿಸಬೇಕು.

ಶಾಸಕರ ಈ ಹೇಳಿಕೆಯು ಕಿಡಿಗೇಡಿಗಳಿಗೆ ತಪ್ಪು ಮಾಡಲು ಪ್ರಚೋದನೆಯನ್ನು ನೀಡಿದಂತಾಗುತ್ತದೆ.ಅದೇ ರೀತಿಯಲ್ಲಿ ತಪ್ಪಿತಸ್ಥ ಯುವಕರನ್ನು ಪೋಲಿಸ್ ಠಾಣೆಯಲ್ಲಿ ಮನವೊಲಿಸುವ ಬದಲು ಶಾಸಕರು ಸರಕಾರಿ ವೆಚ್ಚದಲ್ಲಿ ‌ಪುತ್ತೂರಿನಲ್ಲಿ ಒಂದು ಕೌನ್ಸಲಿಂಗ್ ಸೆಂಟರ್ ತೆರೆದರೆ ಹಲವಾರು ಮಾನಸಿಕ ಅಸ್ವಸ್ತರ ಸಂಖ್ಯೆಯನ್ನು ಕೂಡ ಕಡಿಮೆ ಮಾಡಬಹುದಾಗಿದೆ.

ಆದ್ದರಿಂದ ದ.ಕ ಪೋಲಿಸ್ ಇಲಾಖೆ ಬಿಜೆಪಿ ಶಾಸಕರ ರಾಜಕೀಯ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರು ಯಾವುದೇ ಜಾತಿ ಧರ್ಮಕ್ಕೆ ಒಳಪಟ್ಟರು ಅವರ ವಿರುದ್ಧವಾಗಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಕೆ.ಎ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ..

error: Content is protected !! Not allowed copy content from janadhvani.com