janadhvani

Kannada Online News Paper

ಭಾರತದಲ್ಲಿ ಕೊರೋನಾಗೆ 77 ಮಂದಿ ಬಲಿ- ವಿಶ್ವಾದ್ಯಂತ 64,729 ಮಂದಿ ಮೃತ್ಯು

ನವದೆಹಲಿ ,ಏ. 5: ಕೋವಿಡ್-19 ವೈರಸ್ ದಾಳಿಗೆ ಇಡೀ ಜಗತ್ತೇ ನಲುಗಿ ಹೋಗಿದೆ. ವಿಶ್ವದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 64,729ಕ್ಕೆ ಏರಿಕೆಯಾಗಿದ್ದು, 12,02,242 ಜನರು ಸೋಂಕಿಗೆ ಒಳಗಾಗಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್​ನಿಂದ ಇದುವರೆಗೂ 77 ಜನರು ಮೃತಪಟ್ಟಿದ್ದು, 3,313 ಜನರಿಗೆ ಸೋಂಕು ತಗುಲಿದೆ. ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಕೊರೋನಾ ವೈರಸ್ ಆರ್ಭಟಕ್ಕೆ ಅಮೆರಿಕ ತಲ್ಲಣಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 3,11,635ಕ್ಕೆ ಏರಿಕೆಯಾಗಿದೆ. ಇವರಲ್ಲಿ 8,454 ಜನರು ಸಾವನ್ನಪ್ಪಿದ್ದಾರೆ.

ಜಗತ್ತಿನಲ್ಲಿ ಈಗಾಗಲೇ 260 ಕೋಟಿಗೂ ಅಧಿಕ ಜನರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಪ್ರಮಾಣ 5 ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಭಾರತ ಸೇರಿದಂತೆ ಇಟಲಿ, ಫ್ರಾನ್ಸ್​, ಇಂಗ್ಲೆಂಡ್, ಸ್ಪೇನ್, ಚೀನಾ ಮುಂತಾದ ಹಲವು ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

error: Content is protected !! Not allowed copy content from janadhvani.com