janadhvani

Kannada Online News Paper

ಕೆ.ಸಿ ರೋಡ್ ,ಉಳ್ಳಾಲ ಸಮೀಪದ ಮುಹ್ಯಿದ್ಧೀನ್ ಮಸೀದಿ ಇದರ ನೇತೃತ್ವದಲ್ಲಿ
“ಕಷ್ಟ ಕಾಲದಲ್ಲಿ ನೊಂದವರಿಗೆ ನೆರವಾಗೋಣ”ಎಂಬ ಪ್ರವಾದಿ
ನುಡಿಯಂ\nತೆ ಜಮಾಹತ್ ಪರಿಸರದಲ್ಲಿರುವ ಸುಮಾರು 60 ಕ್ಕಿಂತ ಹೆಚ್ಚು ಅರ್ಹ ಮನೆಗಳಿಗೆ ಧರ್ಮ,ಜಾತಿ,ಪಂಥ ವ್ಯತ್ಯಾಸ ಭೇದವಿಲ್ಲದೆ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನೊಳಂಗೊಂಡ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಸ್ಥಳೀಯ ಮಸೀದಿ ನೇತೃತ್ವದಲ್ಲಿ ಗಲ್ಫ್ ಸಮಿತಿ, SSF ಕಾಟುಂಗರೆ ಗುಡ್ಡೆ ಯುನಿಟ್ ಮತ್ತು ಡೈಮಂಡ್ ವೆಲ್ಫೇರ್ ಇದರ ಸಹಕಾರದೊಂದಿಗೆ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಇವರ ನೇತೃತ್ವದ ಸಂಘಟನಾ ನಾಯಕರಾದ ಅಬ್ದುಲ್ ಖಾದರ್ (ಅದ್ದಾಯಿ), ಆಸಿಫ್,ಝೈನುಧ್ಧೀನ್, ದಾವೂದ್, ಮುಬಾರಕ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.ಈ ಕಾರ್ಯಕ್ರಮ ಯಶಸ್ವಿಗೆ ಬೇಕಾಗಿ ಅಬ್ದುರಝಾಕ್ ನೇತೃತ್ವದ ಅಬ್ದುಲ್ ಲತೀಪ್ ಡೈಮಂಡ್, ಅಬೂಬಕ್ಕರ್ ರಿಯಾದ್ ಮತ್ತು ಝಕರಿಯ ಕೆ.ಬಿ,ನಿಯಾಝ್ ಟಿ ,ಮುಸ್ತಫ ನೇತೃತ್ವದ ಗಲ್ಫ್ ಸಮಿತಿಯು ಸಹಾಯ ಹಸ್ತ ನೀಡಿತು.ಈ ಯೋಜನೆಯ ಯಶಸ್ವಿಗಾಗಿ ಹಗಲಿರುಳು ನಿಸ್ವಾರ್ಥ ಸೇವೆಗೈದ ಅಬ್ದುಲ್ ಖಾದರ್ ಮತ್ತು ಚುರುಕಿನ ನಾಯಕ ಆಸಿಪ್ ನೇತೃತ್ವದ ತಂಡದ ಸೇವೆ ಅಭಿನಂದನಾರ್ಹ.

error: Content is protected !!
%d bloggers like this: