ಲಾಕ್ ಡೌನ್ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕದಲ್ಲಿರುವ ಬಹುತೇಕ ಪೊಲೀಸರು,ತುರ್ತು ಚಿಕಿತ್ಸೆ,ಅಗತ್ಯ ವಸ್ತುವಿಗಾಗಿ ಮನೆಯಿಂದ ರಸ್ತೆಗಿಳಿದ ಜನಸಾಮಾನ್ಯರನ್ನು ವಿಚಾರಿಸದೆ ಯದ್ವಾತದ್ವ ಹೊಡೆದು ಅಮಾನವೀಯ ರೀತಿಯಲ್ಲಿ ವರ್ತಿಸಿದ ಪೊಲೀಸರ ನಡೆ ಜನಸಾಮಾನ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮಾತ್ರವಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ರವರು ಜನಸಾಮಾನ್ಯರ ಮೇಲೆ ಲಾಠಿ ಪ್ರಹಾರ ಮಾಡಬಾರದಾಗಿ ಆದೇಶಿಸಿದ್ದರೂ ಕೂಡ ಪೊಲೀಸರು ಮುಖ್ಯಮಂತ್ರಿಯವರ ಮಾತು ಮೀರಿ ಕ್ರೌರ್ಯ ನಡೆಸಿರುತ್ತಾರೆ.
ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಯವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಪೊಲೀಸರು ಜನಸಾಮಾನ್ಯರೊಂದಿಗೆ ಸೌಜನ್ಯ,ಸಂಯಮದಿಂದ ವರ್ತಿಸಲು ಖಡಕ್ ವಾರ್ನಿಂಗ್ ಕೊಡಬೇಕಾಗಿ ಅನಿವಾಸಿ ಕನ್ನಡಿಗ ಹವ್ಯಾಸಿ ಬರಹಗಾರ ಇಸ್ಹಾಕ್ ಸಿ.ಐ.ಫಜೀರ್ ಅವರು ಮುಖ್ಯಮಂತ್ರಿ ಅವರಿಗೆ ಟ್ವಿಟರ್ ಮತ್ತು ಇಮೇಲ್ ಮೂಲಕ ಮನವಿ ಮಾಡಿರುತ್ತಾರೆ.