janadhvani

Kannada Online News Paper

SSF ದಕ್ಷಿಣ ಕನ್ನಡ ವೆಸ್ಟ್ ಝೋನ್ ಅರ್ಧವಾರ್ಷಿಕ ಸಭೆ

SSF ದಕ್ಷಿಣ ಕನ್ನಡ ವೆಸ್ಟ್ ಝೋನ್ ಇದರ ಅರ್ಧವಾರ್ಷಿಕ ಸಭೆಯು ದಿನಾಂಕ 15-03-2020 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲರವರ ನೇತೃತ್ವದಲ್ಲಿ SSF ಮೇಲಂಗಡಿ ಕಚೇರಿಯಲ್ಲಿ ನಡೆಯಿತು. SSF ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ರವರು ಸಭೆಯನ್ನು ಉದ್ಘಾಟಿಸಿದರು.

SSF ದಕ್ಷಿಣ ಕನ್ನಡ ಮಾಜಿ ಜಿಲ್ಲಾಧ್ಯಕ್ಷರಾದ ಇಸ್ಹಾಕ್ ಝುಹುರಿ ಸೂರಿಂಜೆ ಸಂಘಟನಾ ತರಗತಿ ನಡೆಸಿಕೊಟ್ಟರು. SSF ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ ರವರು ಸಭೆಯ ವೀಕ್ಷಕರಾಗಿ ಆಗಮಿಸಿದ್ದರು. SSF ದಕ್ಷಿಣಕನ್ನಡ ವೆಸ್ಟ್ ಝೋನ್ ಕಾರ್ಯದರ್ಶಿ ಝುಹೈರ್ ಹುಸೈನ್ ಬಜ್ಪೆ ವರದಿ ವಾಚಿಸಿ, ಕೋಶಾಧಿಕಾರಿ ಆಬಿದ್ ನಹೀಮಿ ಕಟ್ಟತ್ತಿಲ ಲೆಕ್ಕಪತ್ರ ಮಂಡಿಸಿದರು.

ತೆರವಾದ 3 ಸದಸ್ಯರ ಬದಲಿಗೆ ಹನೀಫ್ ಅಹ್ಸನಿ ಶೇಡಿಗುರಿ, ಹಮೀದ್ ತಲಪಾಡಿ ಹಾಗೂ ಇರ್ಷಾದ್ ಗೂಡಿನಬಳಿ ರವರನ್ನು ಹೊಸದಾಗಿ ಕಾರ್ಯಕಾರಿಣಿ ಸಮಿತಿಗೆ ಸೇರ್ಪಡೆಗೊಳಿಸಲಾಯಿತು.

ಝೋನ್ ಪದಾಧಿಕಾರಿಗಳಲ್ಲಿ ಕೆಲವರು ಕೆಳಘಟಕಗಳಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾದ ಮೇರೆಗೆ , ಝೋನ್ ಪದಾಧಿಕಾರಿಗಳಲ್ಲಿ ಈ ಕೆಳಗಿನಂತೆ ಕೆಲವು ಮಾರ್ಪಾಡು ಮಾಡಲಾಯಿತು :

ಅಧ್ಯಕ್ಷ: ಮುನೀರ್ ಸಖಾಫಿ ಉಳ್ಳಾಲ

ಉಪಾಧ್ಯಕ್ಷರು : ಅಕ್ಬರಾಲಿ ಮದನಿ ಆಲಂಪಾಡಿ, ನವಾಝ್ ಸಖಾಫಿ ಅಡ್ಯಾರ್ ಪದವು ಹಾಗೂ ಜಬ್ಬಾರ್ ಮೂಡಬಿದ್ರೆ.

ಪ್ರಧಾನ ಕಾರ್ಯದರ್ಶಿ: ಹೈದರ್ ಅಲಿ ಕಾಟಿಪಳ್ಳ
ಕಾರ್ಯದರ್ಶಿ : ಮನ್ಸೂರ್ ಬಜಾಲ್, ಝುಹೈರ್ ಹುಸೈನ್ ಬಜ್ಪೆ ಹಾಗೂ GA ಇಬ್ರಾಹಿಂ ಅಜ್ಜಿನಡ್ಕ.

ಕೋಶಾಧಿಕಾರಿ : ಆಬಿದ್ ನಹೀಮಿ ಕಟ್ಟತಿಲ

ಕ್ಯಾಂಪಸ್ ಕಾರ್ಯದರ್ಶಿ: ಇಲ್ಯಾಸ್ ಪೊಟ್ಟೋಲಿಕೆ

14 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ SSF ದಕ್ಷಿಣ ಕನ್ನಡ ವೆಸ್ಟ್ ಝೋನ್ ಉಸ್ತುವಾರಿ ಮುಹಮ್ಮದ್ ಅಲಿ ತುರ್ಕಲಿಕೆ, ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಹದಿ ಹರೇಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ,
ಜಿಲ್ಲಾ ಕಾರ್ಯದರ್ಶಿಗಳಾದ ರಶೀದ್ ಹಾಜಿ, ರಫೀಕ್ ಸುರತ್ಕಲ್, ಜಿಲ್ಲಾ ಸದಸ್ಯರಾದ ಸಯ್ಯದ್ ಖುಬೈಬ್ ತಂಗಳ್,ಆರಿಫ್ ಝುಹುರಿ ಮುಕ್ಕ,ಇಕ್ಬಾಲ್ ಮಾಚಾರ್, ಮುಸ್ತಾಫಾ ಉರುವಾಲುಪದವು ರವರು ಉಪಸ್ಥಿತರಿದ್ದರು.

ಸಭೆಯ ಯಶಸ್ವಿಗೆ SSF ಉಳ್ಳಾಲ ಸೆಕ್ಟರ್ ಹಾಗೂ ಉಳ್ಳಾಲ ಡಿವಿಷನ್ ನಾಯಕರು
ಎಲ್ಲಾ ರೀತಿಯಲ್ಲಿ ಸಹಕರಿಸಿದರು.

ವೆಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಸ್ವಾಗತಿಸಿ, ಕಾರ್ಯದರ್ಶಿ ಜಿ.ಎ ಇಬ್ರಾಹಿಂ ವಂದಿಸಿದರು.

error: Content is protected !! Not allowed copy content from janadhvani.com