janadhvani

Kannada Online News Paper

ಉಪ್ಪಿನಂಗಡಿ: ದರ್ಗಾ ಶರೀಫ್ ತುರ್ಕಳಿಕೆ‌ ಇಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭವು ದಿನಾಂಕ 15/03/2020 ಆದಿತ್ಯವಾರ ಸಂಜೆ 6 ಗಂಟೆಗೆ ತುರ್ಕಳಿಕೆ ದರ್ಗಾ ವಠಾರದಲ್ಲಿ ದ.ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಇವರ ಘನ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಉರೂಸ್ ಪ್ರಯುಕ್ತ ನಡೆಸಿಕೊಂಡು ಬರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಇಂದಿನಿಂದ ಪ್ರಾರಂಭ ಗೊಳ್ಳಲಿದೆ. ದಿನಾಂಕ 11,12, 13, 14 ರಂದು ಉಪನ್ಯಾಸ, ಸ್ವಲಾತ್ ಮಜ್ಲಿಸ್ ನಡೆಯಲಿದ್ದು ದಿನಾಂಕ 15 ರಂದು ಆದಿತ್ಯವಾರ ಖತಮುಲ್ ಖುರ್ಆನ್, ಮೌಲಿದ್ ಪಾರಾಯಣ, ಸಮಾರೋಪ ಸಮಾರಂಭ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ
ಶೈಖುನಾ ತಾಜುಶ್ಶರೀಅಃ ಅಲಿ ಕುಂಞ ಉಸ್ತಾದ್ , ಸಯ್ಯಿದ್ ಸಾದಾತ್ ತಂಙಳ್, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಬುಖಾರಿ ಕಡಲುಂಡಿ, ಅಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ, ರಫೀಖ್ ಸಹದಿ ದೇಲಂಪಾಡಿ ಜಬ್ಬಾರ್ ಸಖಾಫಿ ಪಾತೂರು, ಕಬೀರ್ ಹಿಮಮಿ, ಸಯ್ಯಿದ್ ಜುನೈದ್ ತಂಙಳ್ ಕೇರಳ, ನೌಫಲ್ ಸಖಾಫಿ ಕಳಸ , ಮೌಲಾನ ಶಾಫಿ ಸಅದಿ, ಅಬ್ದುಲ್ಲ ಸಖಾಫಿ ಕೊಟ್ಟಮುಡಿ ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸ್ಥಳೀಯ ಅಂಗ ಸಂಸ್ಥೆಗಳಾದ SYS ಮತ್ತು SSF ಸಂಘಟನೆಗಳು ಪ್ರಚಾರ ನಿರ್ವಹಣೆ ವಹಿಸಿಕೊಂಡಿದ್ದು , ವಿವಿಧ ಕಡೆಗಳಿಂದ ಸಾವಿರಾರು ಭಕ್ತ ಜನರು ಸಂಗಮಿಸಿ,ಐತಿಹಾಸಿಕವಾಗಿ ಸಮಾಪ್ತಿ ಗೊಳ್ಳಲಿದೆ‌ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅಲಿ ತುರ್ಕಳಿಕೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಅಲಿ ಕರಾಯ, ಅಧ್ಯಕ್ಷರು, Ps ಇಬ್ರಾಹಿಂ ಮದನಿ ಉಪಾಧ್ಯಕ್ಷರು,
ಹಂಝ PT ಪ್ರ. ಕಾರ್ಯದರ್ಶಿಗಳು, ಹೈದರ್ ಹಾಜಿ ಬದ್ಯಾರ್ ಅದ್ಯಕ್ಷರು SYS ಮೂರುಗೋಳಿ ಸೆಂಟರ್ ಭಾಗವಹಿಸಿದ್ದರು.

error: Content is protected !!
%d bloggers like this: