ದಮ್ಮಾಂ: ಸೌದಿಯಲ್ಲಿ ಕೋವಿಡ್-19 ಸೋಂಕು ವ್ಯಾಪಕಗೊಂಡಿದ್ದು, ಅದನ್ನು ತಡೆಗಟ್ಟುವ ಸಲುವಾಗಿ ಸೌದಿ ಇಸ್ಲಾಮಿಕ್ ವ್ಯವಹಾರ ಮತ್ತು ಮಾರ್ಗದರ್ಶನ ಸಚಿವಾಲಯ ಮುಂದಾಗಿದೆ. ಈ ಕುರಿತು ಮಾತನಾಡಿದ ಖಾತೆಯ ಸಚಿವ ಅಬ್ದುಲ್ ಲತೀಫ್ ಅಲ್-ಶೈಖ್, ದೇಶದ ಎಲ್ಲ ಮಸೀದಿಗಳಲ್ಲಿ ಆಝಾನ್ ಕರೆ ಆದ ಹತ್ತು ನಿಮಿಷಗಳ ನಂತರ ಜಮಾಅತ್ ಪೂರ್ಣ ಗೊಳಿಸುವಂತೆ ಸೂಚಿಸಿದ್ದಾರೆ.
ಶುಕ್ರವಾರ ಜುಮಾ ಕುತುಬಾ ಮತ್ತು ನಮಾಝ್ ಅನ್ನು 15 ನಿಮಿಷಗಳಿಗಿಂತ ಹೆಚ್ಚು ಕಾಲ ದೀರ್ಘಗೊಳಿಸಬಾರದು. ಮತ್ತು ಮಸೀದಿಗಳಲ್ಲಿ ಇಹ್ತಿಖಾಫ್ ಕೂರುವುದು, ಉಪವಾಸ ತೊರೆಯಲು ಆಹಾರ ಪೂರೈಸುವುದನ್ನೂ ನಿಷೇಧಿಸಲಾಗಿದೆ. ಮಸೀದಿಗಳಿಂದ ಖರ್ಜೂರಗಳನ್ನು ನೀಗಿಸಿ, ಕುಡಿಯುವ ನೀರಿನ ಕಪ್ ಗಳನ್ನು ಬದಲಿಸಲಾಗಿದೆ.