janadhvani

Kannada Online News Paper

ರಿಯಾದ್: ಕರೋನ ವೈರಸ್ ವಿರುದ್ಧ ಜಾಗರೂಕತೆಯ ಭಾಗವಾಗಿ ಸೌದಿ ಅರೇಬಿಯಾದಲ್ಲಿ ಮಸೀದಿಗಳಲ್ಲಿನ ಶಿಕ್ಷಣ ಮತ್ತು ಖುರ್‌ಆನ್ ತರಗತಿಗಳಿಗೂ ನಿರ್ಬಂಧ ಹೇರಳಾಗಿದೆ.

ಇಸ್ಲಾಮಿಕ್ ವ್ಯವಹಾರಗಳ ಇಲಾಖೆ ದೇಶದ ಎಲ್ಲಾ ಮಸೀದಿಗಳಲ್ಲಿ ಇಂತಹ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ನೀಡಿದೆ. ಮಸೀದಿಗಳಲ್ಲಿ ನಡೆಯುವ ಉಪನ್ಯಾಸಗಳು, ತರಗತಿಗಳು ಮತ್ತು ಕಾರ್ಯಾಗಾರಗಳಿಗೂ ನಿರ್ಬಂಧ ಅನ್ವಯವಾಗುತ್ತವೆ.

ಮಕ್ಕಾದ ಸಾರ್ವಜನಿಕ ಗ್ರಂಥಾಲಯ, ಹರಮ್ ಪ್ರದರ್ಶನ ಮತ್ತು ಕಿಸ್ವಾ ಉತ್ಪಾದನಾ ಕಾರ್ಖಾನೆಯನ್ನೂ ತಾತ್ಕಾಲಿಕವಾಗಿ ಮುಚ್ಚಲಾಯಿತು. ಶಿಕ್ಷಣ ಸಚಿವಾಲಯವು ದೇಶದ ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಿದೆ. ಸೌದಿ ಅರೇಬಿಯಾ ಯುಎಇ, ಬಹ್ರೈನ್, ಕುವೈತ್, ಲೆಬನಾನ್, ಸಿರಿಯಾ, ದಕ್ಷಿಣ ಕೊರಿಯಾ, ಈಜಿಪ್ಟ್, ಇಟಲಿ ಮತ್ತು ಇರಾಕ್‌ನೊಂದಿಗಿನ ಸಮುದ್ರ, ವಾಯು ಮತ್ತು ಸಾರಿಗೆ ಸಂಪರ್ಕವನ್ನು ಕಡಿತ ಗೊಳಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ, ಈವರೆಗೆ 15 ಜನರಿಗೆ ಕೋವಿಡ್ 19 ದೃಢೀಕರಿಸಲಾಗಿದೆ. ರಾಜಧಾನಿ ರಿಯಾದ್ ನಲ್ಲಿ ಮೊದಲ ಕೋವಿಡ್ ಪ್ರಕರಣವು ದೃಢಪಟ್ಟಿದೆ. ಇಟಲಿಗೆ ಭೇಟಿ ನೀಡಿದ್ದ ಯುಎಸ್ ಪ್ರಜೆ ರಿಯಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಇರಾಕ್‌ನಿಂದ ಬಂದ ಬಹ್ರೈನಿ ಮಹಿಳೆಯರಾಗಿದ್ದಾರೆ. ನಾಲ್ಕನೇ ವ್ಯಕ್ತಿಯು ಕಾಯಿಲೆ ಇರುವ ಜನರೊಂದಿಗೆ ಸಂಪರ್ಕದಲ್ಲಿದ್ದವರಾಗಿದ್ದು, ಈ ಮೂರೂ ಪ್ರಕರಣಗಳು ಪೂರ್ವ ಪ್ರಾಂತ್ಯದ ಖತೀಫ್‌ನಿಂದ ವರದಿಯಾಗಿವೆ. ಬಹುಪಾಲು ರೋಗ ಪೀಡಿತರಿರುವ ಖತೀಫ್‌ಗೆ ಇದೀಗ ಹೊರಗಿನ ಯಾರಿಗೂ ಪ್ರವೇಶವಿಲ್ಲ.

error: Content is protected !!
%d bloggers like this: