janadhvani

Kannada Online News Paper

ಬಹ್ರೈನ್: ಕರೋನಾ ತಗುಲಿದ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿಕರ

ಮನಾಮ: ಕರೋನ ವೈರಸ್ ವಿರುದ್ಧದ ಜಾಗೃತಿಯಲ್ಲಿ ಸಾರ್ವಜನಿಕರ ಸಹಾಯ ಮತ್ತು ಬೆಂಬಲ ಬೇಕು ಎಂದು ಕ್ರೌನ್ ಪ್ರಿನ್ಸ್ ಸೆಂಟರ್ ಫಾರ್ ಟ್ರೈನಿಂಗ್ ಆ್ಯಂಡ್ ಮೆಡಿಕಲ್ ರಿಸರ್ಚ್‌ನ ರಾಷ್ಟ್ರೀಯ ಮಿಷನ್ ತಂಡದ ಸದಸ್ಯ ಮತ್ತು ಬಿಡಿಎಫ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಸಲಹೆಗಾರ ಲೆಫ್ಟಿನೆಂಟ್ ಕರ್ನಲ್ ಡಾ.ಮನಾಫ್ ಅಲ್-ಕಹ್ತಾನಿ ಹೇಳಿದ್ದಾರೆ.

ಅವರು ಬಹ್ರೈನ್‌ನ ಆಂತರಿಕ ಮತ್ತು ಆರೋಗ್ಯ ಸಚಿವಾಲಯಗಳು ಜಂಟಿಯಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು.

ರೋಗ ತಡೆಗಟ್ಟುವಿಕೆಗಾಗಿ ಸರಕಾರಿ ಸಚಿವಾಲಯಗಳು ನೀಡುವ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಸಲ್ಮಾನಿಯಾ ವೈದ್ಯಕೀಯ ಸಂಕೀರ್ಣದ ಸಲಹೆಗಾರ್ತಿ ಡಾ. ಜಮೀಲಾ ಹೇಳಿದರು.

ರೋಗವನ್ನು ಪರಿಣಾಮಕಾರಿ ಯಾಗಿ ಎದುರಿಸಲು ಸಾರ್ವಜನಿಕರೆಲ್ಲರ ಸಹಕಾರ ಅಗತ್ಯವಿದೆ. ಫೆಬ್ರವರಿಯಲ್ಲಿ ಇರಾನ್‌ಗೆ ಭೇಟಿ ನೀಡಿದ ಎಲ್ಲ ಜನರು ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕು. ಅವರು 444 ಸಂಖ್ಯೆಯ ಮೂಲಕ ಕರೆ ಮಾಡಿ ವೈದ್ಯಕೀಯ ಪರೀಕ್ಷೆಯನ್ನು ಕಾಯ್ದಿರಿಸಬಹುದು.

error: Content is protected !! Not allowed copy content from janadhvani.com