ಮಕ್ಕಾ: ಈ ವರ್ಷದ ಪವಿತ್ರ ಹಜ್ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಹಜ್ಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಒದಗಿಸಲಾಗುವ ಸೇವೆಗಳ ಬಗ್ಗೆ ಮೌಲ್ಯಮಾಪನ ನಡೆಸುವ ಮೊದಲ ಸಭೆಯು ಸೌದಿ ಹಜ್ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಮಕ್ಕಾದಲ್ಲಿ ನಡೆಯಿತು.
ಈ ಸಭೆಯು ಕಳೆದ ವರ್ಷದ ಹಜ್ ಋತುವಿನಲ್ಲಿ ಪ್ರಮುಖ ವಿಷಯಗಳ ಪರಿಶೀಲನೆಯ ಭಾಗವಾಗಿತ್ತು. ಸೌದಿ ಹಜ್ ಸಚಿವಾಲಯದ ಕಾರ್ಯದರ್ಶಿ ಹುಸೈನ್ ಬಿನ್ ನಾಸರ್ ಅಲ್-ಶರೀಫ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಭೆಯಲ್ಲಿ, ಯಾತ್ರಾರ್ಥಿಗಳನ್ನು ಸ್ವೀಕರಿಸಲು ಮತ್ತು ತೀರ್ಥಯಾತ್ರಿಕರಿಗೆ ಅನುಕೂಲವಾಗುವಂತೆ ಪ್ರಯತ್ನಿಸುವ ಬಗ್ಗೆ, ಸಂಪೂರ್ಣ ತೀರ್ಥಯಾತ್ರಿಕರ ಸೇವೆಗಳನ್ನು ಸಂಯೋಜಿಸಲು ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಹಜ್ ಯೋಜನೆಗಳ ಯಶಸ್ಸಿನ ಬಗ್ಗೆ ಚರ್ಚೆ ನಡೆದವು.
ಮೊದಲ ಜಂಟಿ ಸಭೆಯಲ್ಲಿ, ಗೃಹ ಸಚಿವಾಲಯ, ಸಾರ್ವಜನಿಕ ಭದ್ರತೆ, ಆಡಳಿತ, ನಾಗರಿಕ ರಕ್ಷಣಾ, ಸೌಲಭ್ಯ ಭದ್ರತೆ, ವಿಶೇಷ ತುರ್ತು ಸೇವೆ, ಮಕ್ಕಾ ಭದ್ರತಾ ಪಡೆ, ಸಾಮಾನ್ಯ ಸಂಚಾರ ಇಲಾಖೆ, ಮಕ್ಕಾ ಗವರ್ನರೇಟ್, ಮಕ್ಕಾ ಅಭಿವೃದ್ಧಿ ಪ್ರಾಧಿಕಾರ, ಮಕ್ಕಾ ರಾಯಲ್ ಆಯೋಗ, ಹೋಲಿಯಾರ್ ಕ್ಯಾಪಿಟಲ್ ಸಂಸ್ಥೆ ಮತ್ತು ಹಜ್, ಉಮ್ರಾ ಸಂಸ್ಥೆಗಳು, ಸ್ಥಳೀಯ ಯಾತ್ರಿಕರ ಸಮನ್ವಯ ಮಂಡಳಿ ಮತ್ತಿತರ ಸಚಿವಾಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ