ರಿಯಾದ್: ಸೌದಿ ಅರೇಬಿಯಾದ ಜಿದ್ದಾ ಮತ್ತು ಮಕ್ಕಾದಲ್ಲಿ ವಾಸ, ಉದ್ಯೋಗ ಕಾನೂನು ಉಲ್ಲಂಘನೆಗಾರರ ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಬಂಧನಕ್ಕೊಳಗಾದ 500 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಮಕ್ಕಾದ ಗಡೀಪಾರು ಕೇಂದ್ರಕ್ಕೆ ರವಾನಿಸಲಾಗಿದೆ. ಅವರನ್ನು ಆದಷ್ಟು ಬೇಗ ಊರಿಗೆ ತಲುಪಿಸಲಾಗುವುದು ಎಂದು ಭಾರತೀಯ ದೂತಾವಾಸ ಕೇಂದ್ರ ತಿಳಿಸಿದೆ.
ಕಾನೂನು ಉಲ್ಲಂಘಕರಿಲ್ಲದ ದೇಶ ಎನ್ನುವ ಅಭಿಯಾನದ ಭಾಗವಾಗಿ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ತಪಾಸಣೆ ಮುಂದುವರೆದಿದೆ. ಜಿದ್ದಾ ಮತ್ತು ಮಕ್ಕಾದಲ್ಲಿ ತೀವ್ರ ತಪಾಸಣೆಯನ್ನು ನಡೆಸಲಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ, ಎರಡು ವರ್ಷಗಳಲ್ಲಿ 44 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಈ ಅಭಿಯಾನದಲ್ಲಿ ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯ, ಜವಾಝಾತ್ ವಿಭಾಗ ಸೇರಿದಂತೆ 19 ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳು ಸೇರಿವೆ.
ತಪಾಸಣೆಯು ವಸತಿ ಮತ್ತು ಉದ್ಯೋಗ ಕಾನೂನು ಉಲ್ಲಂಘಿಸುವವರನ್ನು ಗುರಿಯಾಗಿಸಿರುತ್ತದೆ. ಉಲ್ಲಂಘಿಸುವವರಿಗೆ ಉದ್ಯೋಗ, ಪ್ರಯಾಣ ಮತ್ತು ವಸತಿ ನೆರವು ನೀಡುವುದು ಕೂಡ ಅಪರಾಧವಾಗಿದೆ. ಮಕ್ಕಾ ಶುಮೈಸಿ ತರ್ಹೀಲ್ನಲ್ಲಿ ಪ್ರಸ್ತುತ 500 ಕ್ಕೂ ಹೆಚ್ಚು ಭಾರತೀಯರಿದ್ದು, ಅವರ ಪೈಕಿ 150 ಕ್ಕೂ ಹೆಚ್ಚು ಜನರ ಪ್ರಯಾಣದ ದಾಖಲೆಗಳು ಸರಿಯಾಗಿವೆ ಮತ್ತು ಉಳಿದ ಪ್ರಯಾಣಿಕರ ದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿದ್ದಾದ ಭಾರತೀಯ ದೂತಾವಾಸ ತಿಳಿಸಿದೆ.
ಲೆವಿ ಪಾವತಿಯಿಂದ ತಪ್ಪಿಸಲು ಹೌಸ್ ಡ್ರೈವರ್ ವಿಸಾದಲ್ಲಿ ಬಂದು ಇತರ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರನ್ನು ಈಗಾಗಲೇ ಬಂಧಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ