janadhvani

Kannada Online News Paper

ಪಾಕ್ ಪರ ಘೋಷಣೆ: ಎಸ್ಸೆಸ್ಸೆಫ್ ಖಂಡನೆ

ಮಂಗಳೂರು,ಫೆ.20: ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಯುವತಿಯೋರ್ವಳು ಪಾಕ್ ಪರ ಘೋಷಣೆ ಕೂಗಿರುವುದನ್ನು ಎಸ್ಸೆಸ್ಸೆಫ್‌ ಕರ್ನಾಟಕ ರಾಜ್ಯಾಧ್ಯಕ್ಷ ಅಸ್ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿ ಖಂಡಿಸಿದ್ದಾರೆ.

ಯುವತಿಯು ಯಾವ ಉದ್ದೇಶದಿಂದ ಕೂಗಿದ್ದರೂ ಅದು ಅನಗತ್ಯ ಹಾಗೂ ಅತಿರೇಕದ ವರ್ತನೆಯಾಗಿದೆ. ತರ್ಕಬದ್ಧವಲ್ಲದ, ಅಪ್ರಬುದ್ಧ ಹಾಗೂ ಅತಿರೇಕದ ಮಾತನ್ನಾಡುವ ಅನನುಭವಿಗಳು ತಮ್ಮ ಸಭೆಗಳಿಗೆ ನುಸುಳದಂತೆ ಮುಂದೆ ಪ್ರತಿಭಟನೆ ಆಯೋಜಿಸುವ ಎಲ್ಲರೂ ಎಚ್ಚರ ವಹಿಸಬೇಕಾಗಿದೆ.

ಅತಿರೇಕದ, ಉದ್ರೇಕಕಾರಿ ಭಾಷಣ ಮಾಡುವವರು ಯಾವುದೇ ಧರ್ಮಾನುಯಾಯಿಯಾದರೂ ಯಾವ ಸಂಘಟನೆಯವರಾದರೂ ಅವರನ್ನು ಎಲ್ಲ ಸಭೆಗಳಿಂದ ದೂರ ಇಡಬೇಕು ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಪತ್ರಿಕಾ ಪ್ರಕಟನೆಯಲ್ಲಿ ಅವರು ಕರೆ ಕೊಟ್ಟಿದ್ದಾರೆ.

error: Content is protected !! Not allowed copy content from janadhvani.com