janadhvani

Kannada Online News Paper

ಇಳಂತಿಲ ಮುರ : SYS SSF ಇಳಂತಿಲ ಮುರ ಶಾಖೆ ವತಿಯಿಂದ 11 ನೇ ಅಜ್ಮೀರ್ ಆಂಡ್ ನೇರ್ಚೆಯ ಪ್ರಯುಕ್ತ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮ ಇಳಂತಿಲ ಮುರಾದಲ್ಲಿ ನಡೆಯಿತು.

ಜಮಾತ್ ಅಧ್ಯಕ್ಷರಾದ ಇಬ್ರಾಹಿಂ ಯನ್.ಯನ್.ಬಿ ಕಾರ್ಯಕ್ರಮದ ಧ್ಯಕ್ಷತೆ ವಹಿಸಿದ್ದು, ಮಸೀದಿಯ ಧರ್ಮಗುರು ಅಶ್ರಫ್ ಝೈನಿ ಉಸ್ತಾದ್ ದುವಾ ನೆರವೇರಿಸಿದರು. ಇಳಂತಿಲ ಗ್ರಾಮಪಂಚಾಯತ್ ಅಧ್ಯಕ್ಷ ಯೂಸುಫ್ ಮಾತನಾಡಿ S.Y.S ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಸರ್ವ ಜನಾಂಗಕ್ಕೂ ಪ್ರಯೋಜನಕಾರಿಯಾಗಿದೆ ಎಂದರು.

ಕ್ಲಸ್ಟರ್ ಅಧಿಕಾರಿ ಶರೀಫ್ ಸಾರ್ ಮಾತನಾಡಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಸರಕಾರ ಜಾಗೃತಿ ಮೂಡಿಸುತ್ತಿದ್ದು, ಹಳ್ಳಿಯಲ್ಲಿ ಬಡವರಿಗೆ ಅಧಿಕ ಬೆಲೆಯುಳ್ಳ ಸ್ಟೀಲ್ ಬಾಟಲ್ ತೆಗೆದು ಕೊಡಲು ಕಷ್ಟ ಎಂಬುದನ್ನು ಅರಿತು ಯಸ್.ವೈ.ಯಸ್. ಎಲ್ಲಾ ಮಕ್ಕಳಿಗೂ ಉಚಿತವಾಗಿ ಬಾಟಲಿ ನೀಡಿರುವುದು ಶ್ಲಾಘನೀಯ . ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದ ಅವರು, ವಿದ್ಯಾಭ್ಯಾಸದಿಂದ ಮಕ್ಕಳು ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು ಎಂಬ ಬಗ್ಗೆ ವಿವರಿಸಿದರು.

ಬಂದಾರು ಗ್ರಾಮಪಂಚಾಯತ್ ಅಧ್ಯಕ್ಷ ನ್ಯಾಯವಾದಿ ಉದಯ ಕುಮಾರ್ ಬಿ.ಕೆ. ಮಾತನಾಡಿ ಮಾದರಿ ಶಾಖೆಯಾಗಿ ಪ್ರತೀ ವರ್ಷವೂ ಸಾರ್ವಜನಿಕರಿಗೆ ಅತ್ಯಂತ ಪ್ರಾಯೋಜಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸುತ್ತಿದೆ ಎಂದರು. ಬುಳೇರಿ ಶಾಲಾ ಪ್ರಾಧ್ಯಾಪಕಿ ಜೆಸಿಂತಾ, ಇಳಂತಿಲ ಗ್ರಾಮಪಂಚಾಯತ್ ಸದಸ್ಯ ನ್ಯಾಯವಾದಿ ಮನೊಹರ್ ಕುಮಾರ್ ಮಾತನಾಡಿದರು. ಸಂಜೆ 6.30 ರ ವರೆಗೂ ಅಂಚೆ ಇಲಾಖೆ ಪುತ್ತೂರು ವಿಭಾಗದ ಲೊಕನಾಥ ಎಂ ಹಾಗೂ ಅಧಿಕಾರಿ ತಂಡದವರಿಂದ ಆಧಾರ್ ಕಾರ್ಡ್ ಸೇವೆಗಳು ನಡೆದಿದ್ದು ಸುಮಾರು102 ಜನ ಪ್ರಯೋಜನ ಪಡೆದು ಕೊಂಡಿದ್ದಾರೆ. ಫೆಬ್ರವರಿ 17ರಂದು ಕೂಡ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಯೋಜಕರು ತಿಳಿಸಿದರು.

ಜಮಾತ್ ಅಧ್ಯಕ್ಷ ರಾದ ಇಬ್ರಾಹಿಂ ಯನ್.ಯನ್.ಬಿ, ಅಜ್ಮೀರ್ ಆಂಡ್ ನೇರ್ಚೆಯ ಸ್ವಾಗತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಮುರ,
ಶರೀಫ್ ಯನ್.ಯನ್.ಬಿ ಲತೀಫ್ ಕನ್ಯಾರಕೋಡಿ, ಸಬೀರ್ ಪಚ್ಚಡ್ಕ, ಕುಂಞ ಅಹ್ಮದ್ ಪಚ್ಚಡ್ಕ, ಹಸೈನಾರ್ ಮುರ, ಬಾಲಕೃಷ್ಣ ಭಟ್
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬುಳೇರಿ ಶಾಲಾ ದೈಹಿಕ ಶಿಕ್ಷಕರಾದ ಯೂಸುಫ್ ಸಾರ್ ಸ್ವಾಗತಿಸಿದರು. ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷ ಮುಸ್ತಫ ಮದನಿ ಧನ್ಯವಾದಗೈದರು.
ವರದಿ : ರಹ್ಮಾನ್ ಜೋಗಿ ಬೆಟ್ಟು

error: Content is protected !!
%d bloggers like this: