janadhvani

Kannada Online News Paper

ಫೆ.23: ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾ ಘೋಷಣೆ ಹಾಗೂ ಪ್ರಜಾ ಭಾರತ ಬೃಹತ್ ಸಮಾವೇಶ

ಗಂಗಾವತಿ : ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾ ಘೋಷಣೆ ಹಾಗೂ ಪ್ರಜಾ ಭಾರತ ಬೃಹತ್ ಸಮಾವೇಶ ಫೆಬ್ರವರಿ 23 ರವಿವಾರ ಸಂಜೆ 6ಗಂಟೆಗೆ ಕರ್ನೂಲ್ ಸಾಹೇಬ್ ದರ್ಗಾ ಮೈದಾನದಲ್ಲಿ ನಡೆಯಲಿದೆ ಎಂದು ಇಂದು ನಗರದ ಸರ್ಕಿಟ್ ಹೌಸ್ ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಂದು ಮಧ್ಯಾಹ್ನ 3ಗಂಟೆಗೆ ಸರ್ಕಿಟ್ ಹೌಸ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಮುಸ್ಲಿಂ ಜಮಾಅತ್ ನೂತನ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು ಅದರ ಘೋಷಣೆ ಹಾಗೂ ರಾಜ್ಯದಾದ್ಯಂತ ‘ದ್ವೇಷ ಬಿಟ್ಟು ದೇಶ ಕಟ್ಟು’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಪ್ರಜಾಭಾರತ ಸಮಾವೇಶ ಕರ್ನೂಲ್ ಸಾಹೇಬ್ ದರ್ಗಾ ಮೈದಾನದಲ್ಲಿ ಸಂಜೆ ಏಳು ಗಂಟೆಗೆ ನಡೆಯಲಿದೆ.

ಸಮಾರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿಯೇ ಕರ್ನಾಟಕ ಮೌಲಾನಾ ಅನ್ವರ್ ಅಲಿ ಖಾದ್ರಿ ರಾಮನಗರ, ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಮೌಲಾನ ಅಬೂ ಸುಫ್ಯಾನ್ ಮದನಿ ಮಂಗಳೂರು, ರಾಜ್ಯ ವಕ್ಫ್ ಸದಸ್ಯರಾದ ಯಾಕೂಬ್ ಯೂಸುಫ್ ಹೊಸನಗರ, ಆಸಿಫುಲ್ಲಾ ಕೊಪ್ಪಳ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರಾದ ಜನಾಬ್ ಹಸನ್ ಸಾಹೇಬ್ ಕುಷ್ಟಗಿ ಹಾಗೂ ಇನ್ನಿತರ ಉಲಮಾ ಉಮರಾ ಪ್ರಮುಖ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮಕ್ಕೆ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಟೆಂಟ್ ಆಂಡ್ ಡೆಕರೇಷನ್ ಸಮಿತಿ ರಾಜ್ಯಾಧ್ಯಕ್ಷ ಮೆಹಬೂಬ್ ಸಿದ್ದಾಪುರ ಸ್ವಾಗತಿಸಿದರು.

ಹಿರಿಯ ಸಾಮಾಜಿಕ ಹೋರಾಟಗಾರ ಸಯ್ಯದ್ ಅಲಿ ಗಂಗಾವತಿ, ಹಾಜಿ ಹುಸೈನ್ ಸಾಬ್ ತುಂಗಭದ್ರಾ, ಆರೀಫ್ ಸಾಹೆಬ್ ಸಿದ್ದಾಪುರ, ಗುಲಾಂ ಹುಸೈನ್ ನೂರಿ ಬೂದುಗುಂಪ, ಜನಾಬ್ ಝುಬೈರ್ ಸಾಹೇಬ್ ಗಂಗಾವತಿ, ಮೌಲಾನಾ ನಝೀರ್ ಹಝ್ರತ್ ನರ್ಸಾಪುರ, ಖಾಜಾ ಮೌಲಾನ ತಾವರಗೇರಾ, ನೂರುದ್ದೀನ್ ರಝ್ವಿ ಇಲಾಹಿ ಕಾಲೋನಿ, ಹಾಫಿಝ್ ಸಲೀಂ, ಎಂ ರಾಜಾ ಸಾಬ್ ಗಂಗಾವತಿ, ಆರ್ ಟಿ ಒ ಝುಬೈರ್ ಸಾಹೇಬ್, ಮೆಹಬೂಬ್ ಬಸಾಪಟ್ಟಣ , ಖಾಜಾ ಬರಕಾತಿ, ಖಾಜಾ ಗಂಗಾವತಿ ಹಾಗೂ ಇನ್ನಿತರ ಉಲಮಾ ಉಮರಾ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.