janadhvani

Kannada Online News Paper

ಜಿದ್ದಾ: ಸೌದಿ ಸಾರಿಗೆ ಸಚಿವಾಲಯ ಪ್ರಾರಂಭಿಸಿದ ಹೊಸ ಜಿದ್ದಾ ಮಕ್ಕಾ ರಸ್ತೆ ಯೋಜನೆಯ ಶೇ.51 ಪೂರ್ಣಗೊಂಡಿರುವುದಾಗಿ ಸಚಿವಾಲಯ ತಿಳಿಸಿದೆ. ಮಕ್ಕಾ ಅಲ್-ಮುಕರ್ರಮ ಗವರ್ನರೇಟ್‌ನ 27 ಕಿಲೋಮೀಟರ್‌ನಷ್ಟಿರುವ ಜಿದ್ದಾ ಮಕ್ಕಾ ನಡುವೆ ನಿರ್ಮಾಣವಾಗುತ್ತಿರುವ ರಸ್ತೆ ಯೋಜನೆಯ ಮೂರನೇ ಹಂತ ಪೂರ್ಣಗೊಂಡಿದ್ದು, ಸೌದಿಗೆ ಆಗಮಿಸುವ ಯಾತ್ರಿಕರು ಹರಮ್ ಶರೀಫ್‌ಗೆ ಶೀಘ್ರವಾಗಿ ತಲುಪಲು ಈ ಮೂಲಕ ಸಾಧ್ಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಹೊಸ ರಸ್ತೆಯು ಮಕ್ಕಾ ಮತ್ತು ಜಿದ್ದಾ ನಗರವನ್ನು ಸಂಪರ್ಕಿಸುವ ಮೂರನೇ ರಸ್ತೆಯಾಗಲಿದೆ. ನಿರ್ಮಾಣ ಪೂರ್ಣಗೊಂಡ ನಂತರ ಇದು ಜಿದ್ದಾದಿಂದ ಮಕ್ಕಾಗೆ ಅತಿ ವೇಗದ ರಸ್ತೆಯಾಗಲಿದೆ. ಮಕ್ಕಾದ ಮೂರನೇ ರಿಂಗ್ ರಸ್ತೆಯ ಅಲ್-ಫೈಹಾದಲ್ಲಿ ಪ್ರಾರಂಭವಾಗಲಿದ್ದು, ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಿಮಾನ ನಿಲ್ದಾಣ ಸೇತುವೆಯನ್ನು ತಲುಪಲಿದೆ.

error: Content is protected !!
%d bloggers like this: