ಯುಎಇ: ಸಾಲ ಪಡೆದು ಪರಾರಿಯಾದ ಭಾರತೀಯರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಬ್ಯಾಂಕ್

ಅಬುಧಾಬಿ: ಸಾಲ ಪಡೆದು ತಪ್ಪಿಸಿಕೊಂಡ ಭಾರತೀಯರನ್ನು ಬಂಧಿಸಲು ಯುಎಇಯ ಒಂಬತ್ತು ಬ್ಯಾಂಕುಗಳು ಕಾನೂನು ಸಲಹೆ ಕೋರಿವೆ. ಸಣ್ಣ ಸಾಲಗಳಲ್ಲಿಯೂ ಮರುಪಾವತಿ ವಿಳಂಬ ಉಂಟಾದರೆ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಯೋಜನೆಗಳಿವೆ. ಯುಎಇಯ ಸಿವಿಲ್ ಕೋರ್ಟ್ ನಿಯಮಗಳನ್ನು ಭಾರತದ ಜಿಲ್ಲಾ ನ್ಯಾಯಾಲಯ ಮೂಲಕ ಜಾರಿಗೊಳಿಸಬಹುದು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಸಾಲ ಪಡೆದು ಭಾರತಕ್ಕೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮರುಪಾವತಿ ಕುಸಿತಗೊಂಡ ಹಿನ್ನೆಲೆಯಲ್ಲಿ ಯುಎಇಯ ಬ್ಯಾಂಕುಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ತಡೆಗಟ್ಟುವುದು ಬ್ಯಾಂಕಿನ ಮೊದಲ ಹೆಜ್ಜೆ. ಈ ಹಿಂದೆ ಸಣ್ಣ ಸಾಲಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿರಲಿಲ್ಲವಾದರೂ, ಮುಂದೆ ಅಂತವರ ವಿರುದ್ಧವೂ ನಾಗರಿಕ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಯುಎಇಯ ಸಿವಿಲ್ ಕೋರ್ಟ್ ನಿಯಮಗಳನ್ನು ಭಾರತದ ಜಿಲ್ಲಾ ನ್ಯಾಯಾಲಯಗಳ ಮೂಲಕ ಜಾರಿಗೊಳಿಸಬಹುದು ಎಂದು ಕೇಂದ್ರ ಸರಕಾರ ಕಳೆದ ತಿಂಗಳು ನೀಡಿದ ಅಧಿಸೂಚನೆಯ ಬಳಿಕ ಬ್ಯಾಂಕುಗಳು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದವು. ಯುಎಇ ಮೂಲದ ಬ್ಯಾಂಕುಗಳು ಮತ್ತು ಅಬುಧಾಬಿ ಮತ್ತು ದುಬೈನಲ್ಲಿ ಶಾಖೆಗಳನ್ನು ಹೊಂದಿರುವ ಒಂಬತ್ತು ಬ್ಯಾಂಕುಗಳು ಸಾಲ ನೀಡಿದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿವೆ. ಎರಡೂ ಕಡೆಯ ಮನವಿಯನ್ನು ಆಲಿಸಿದ ನಂತರ ಪ್ರಕಟಿಸಲಾದ ವಿಧಿಯನ್ನು ಮಾತ್ರ, ಭಾರತದಲ್ಲಿ ತೀರ್ಪು ಪ್ರಕಟಿಸಬಹುದು ಎಂಬುದು ಷರತ್ತಾಗಿದೆ.

ಆದರೆ, ಈ ರೀತಿಯ ತೀರ್ಪುಗಳು ವಿರಳ ಎಂಬುದು ಬ್ಯಾಂಕುಗಳ ಮುಖ್ಯ ಸಮಸ್ಯೆಯಾಗಿವೆ. ಪ್ರಕರಣದ ವಿಚಾರಣೆ ನಡೆಯುವ ಮುನ್ನ ದೇಶ ತೊರೆದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ. ಕಾನೂನುಬಾಹಿರ ವಿಧಾನಗಳ ಮೂಲಕ ಹಣವನ್ನು ವಸೂಲಿ ಮಾಡುವ ವಿದೇಶಿ ಬ್ಯಾಂಕುಗಳ ಪ್ರಯತ್ನವನ್ನು ನ್ಯಾಯಾಲಯದ ಆದೇಶದ ಮೂಲಕ ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!