ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆಯೇ?

ನವದೆಹಲಿ: ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಸೋಂಕು ಪಸರಿಸುತ್ತದೆಯೇ?. ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಅಲರ್ಟ್ ವೊಂದನ್ನು ಜಾರಿಗೊಳಿಸಿದ್ದು, ಚಿಕನ್ ಹಾಗೂ ಮೊಟ್ಟೆ ತಿನ್ನುವುದಕ್ಕೂ ಮುನ್ನ ಚೆನ್ನಾಗಿ ಬೇಯಿಸಿ ಸೇವಿಸಲು ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ, ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಪರಿಗಣಿಸಿ ಚಿಕನ್, ಮಟನ್ ಹಾಗೂ ಮೊಟ್ಟೆ ಖರೀದಿಸುವ ವೇಳೆ ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಸೂಚಿಸಿದೆ. ಈ ಕುರಿತು ನಿರ್ದೇಶನಗಳನ್ನು ಜಾರಿಗೊಳಿಸಿರುವ ಸಚಿವಾಲಯ, ಈ ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಚೆನ್ನಾಗಿ ಬೇಯಿಸಲು ಸೂಚಿಸಿದೆ.

ಆದರೆ, ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಶುಸಂಗೋಪನಾ ಇಲಾಖೆ ಸದ್ಯ ಈ ಸೋಂಕು ಭಾರತದಲ್ಲಿ ದನಗಳಿಗೆ ಹರಡಿಲ್ಲ ಎಂದು ಹೇಳಿದೆ. ಸದ್ಯ ಈ ವೈರಸ್ ಸೋಂಕು ಚೀನಾದಲ್ಲಿ ಕೇವಲ ಮಾನವರಿಂದ ಮಾನವರಿಗೆ ಮಾತ್ರ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಚೀನಾದಲ್ಲಿಯೂ ಕೂಡ ಇದು ಕೋಳಿಗಳಿಗೆ ಅಥವಾ ದನಗಳಲ್ಲಿ ಪಸರಿಸಿಲ್ಲ ಎನ್ನಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಕೂಡ ತನ್ನ ನಾಗರಿಕರಿಗೆ ಈ ಮಾಂಸಾಹಾರಿ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಲು ಸೂಚಿಸಿದೆ.

ದೇಶಾದ್ಯಂತ ಚಿಕನ್ ಮಾರಾಟದಲ್ಲಿ ಇಳಿಕೆ
ವಿಭಿನ್ನ ವರದಿಗಳ ಪ್ರಕಾರ ಚೀನಾದಲ್ಲಿ ಕರೋನಾ ವೈರಸ್ ಸೋಂಕು ಹರಡಿದ ಬಳಿಕ ಭಾರತದಲ್ಲಿ ಚಿಕನ್ ಮಾರಾಟದಲ್ಲಿ ಇಳಿಕೆಯಾಗಿದೆ. ಅಂಕಿ-ಅಂಶಗಳ ಪ್ರಕಾರ ದೇಶಾದ್ಯಂತ ಚಿಕನ್ ಮಾರಾಟದಲ್ಲಿ ಶೇ.10-ಶೇ.15ರಷ್ಟು ಇಳಿಕೆಯಾಗಿದೆ. ಕಳೆದ ಬಾರಿ ಸಾರ್ಸ್ ವೈರಸ್ ಕೂಡ ಚಿಕನ್ ನಂತಹ ಪದಾರ್ಥಗಳಿಂದ ಹರಡಿದ್ದು, ಕರೋನಾ ವೈರಸ್ ಕೂಡ ಸಾರ್ಜ್ ಪ್ರಜಾತಿಗೆ ಸೇರಿದ್ದಾಗಿದೆ. ಇದೆ ಕಾರಣದಿಂದ ಚಿಕನ್ ಸೇವಿಸುವ ಜನರಲ್ಲಿ ಚಿಕನ್ ಸೇವನೆಯ ಪ್ರಮಾಣ ಇಳಿಕೆಯಾಗಿದೆ ಎನ್ನಲಾಗಿದೆ.

100 ರೂ.ಗಳಿಗಿಂತ ಕೆಳಕ್ಕೆ ಜಾರಿದೆ ಚಿಕನ್ ಬೆಲೆ
ವಿಭಿನ್ನ ಮಾರುಕಟ್ಟೆಗಳಿಂದ ಸಿಕ್ಕ ಮಾಹಿತಿ ಪ್ರಕಾರ ದೆಹಲಿಯಲ್ಲಿ ಪ್ರತಿ ಕೆ.ಜಿ. ಚಿಕನ್ ಬೆಲೆ ರೂ.72ಕ್ಕೆ ತಲುಪಿದೆ. ಇದೇ ರೀತಿ ಪುಣೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಚಿಕನ್ ಬೆಲೆ ರೂ. ಕ್ಕೆ ಬಂದು ತಲುಪಿದೆ. ಇನ್ನೊಂದೆಡೆ ಮೊಟ್ಟೆಯ ಬೆಲೆಯಲ್ಲಿಯೂ ಕೂಡ ಭಾರಿ ಇಳಿಕೆ ಕಂಡುಬಂದಿದೆ.

ಸದ್ಯ ವಿಶ್ವಾದ್ಯಂತ ಈ ವೈರಸ್ ಸೋಂಕಿಗೆ ಸುಮಾರು 1000 ಜನರು ಮೃತಪಟ್ಟಿದ್ದು, ಚೀನಾದಲ್ಲಿ ಸುಮಾರು 40 ಸಾವಿರಕ್ಕಿಂತ ಅಧಿಕ ಜನರಿಗೆ ಈ ವೈರಸ್ ಸೋಂಕು ತಗುಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!