ರಿಯಾದ್: ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸೌದಿ ಅರೇಬಿಯಾದ ಪರಿಸರ, ನೀರು ಮತ್ತು ಕೃಷಿ ಸಚಿವಾಲಯವು ಹುರೈಮಿಲಾದ ಒಂದು ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಈ ರೋಗವನ್ನು ಪತ್ತೆ ಹಚ್ಚಿದ್ದು, ಇದರಿಂದಾಗಿ ಸೋಂಕು ಪೀಡಿತ ಹಕ್ಕಿಗಳ ಸಂಪರ್ಕದಲ್ಲಿದ್ದ ಸುಮಾರು 35,000 ಕೊಳಿಗಳನ್ನು ನಾಶಪಡಿಸಲಾಗಿದೆ.
ಇನ್‌ಫ್ಲುವಂಸಾ ಎ ವೈರಸ್‌ನ ಉಪವಿಭಾಗವಾಗಿರುವ ವೈರಸ್ ಎಚ್5 ಎನ್8 (ಬರ್ಡ್ ಫ್ಲೂ ವೈರಸ್) ಇದಾಗಿದೆ. ಇದು ಪಕ್ಷಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತುದ್ದು ಮನುಷ್ಯರಿಗೆ ಹರಡುವುದಿಲ್ಲ ಎಂದು ಸಚಿವಾಲಯದ ವಕ್ತಾರ ಡಾ.ಅಬ್ದುಲ್ಲಾ ಅಂಬಾ ಅಲ್-ಖಲೀಲ್ ವ್ಯಕ್ತಪಡಿಸಿದ್ದಾರೆ.
ಕೋಳಿ ಕೃಷಿಕರು ಮತ್ತು ಕಾರ್ಮಿಕರು ಈ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು ಮತ್ತು ತಡೆಗಟ್ಟುವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೊಸ ಪಕ್ಷಿಗಳನ್ನು ಮಾರಾಟ ಮಾಡಬಾರದು ಅಥವಾ ಬೇಟೆಯಾಡಬಾರದು ಎಂದೂ ಅವರು ಸೂಚಿಸಿದ್ದಾರೆ. ಹಕ್ಕಿಗಳ ಸಾವಿನ ಬಗ್ಗೆ ಟೋಲ್ ಫ್ರೀ ಸಂಖ್ಯೆ 8002470000 ಗೆ ಮಾಹಿತಿ ನೀಡಬೇಕು ಎಂದು ಅವರು ವಿನಂತಿಸಿದರು.