janadhvani

Kannada Online News Paper

ಫೆ.15 ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕನ್ಯಾನಕ್ಕೆ

ವಿಟ್ಲ : ಕನ್ಯಾನದಲ್ಲಿ ಕಳೆದೆರಡು ದಶಕಗಳಿಂದ ಬಡ ಮತ್ತು ಅನಾಥರ ಸೇವೆಗೆಯ್ಯುತ್ತಿರುವ ದುಲ್ ಫುಖಾರ್ ಸೇವಾ ಸಂಘ ಚೆಡವು ಕನ್ಯಾನ ಇದರ 20 ನೇ ವಾರ್ಷಿಕೋತ್ಸವ ಅಂಗವಾಗಿ ಕನ್ಯಾನ‌ ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ 2020 ಫೆಬ್ರವರಿ 15 ರಂದು ಮಗ್ರಿಬ್ ನಮಾಝ್ ಬಳಿಕ ಬೃಹತ್ ಕಾರ್ಯಕ್ರಮ ನಡೆಯಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ , ಅಸಯ್ಯಿದ್ ಖುರ್ರತುಸ್ಸಾದ್ ಫಝಲ್ ಕೋಯಮ್ಮ ತಂಙಳ್ ಕೂರತ್ ( ಕನ್ಯಾನ ಖಾಝಿ ) , ಅಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ , ಶೈಖುನಾ ತಾಜುಶ್ಶರೀಅ ಎಂ ಆಲಿಕುಂಞ್ಣಿ ಉಸ್ತಾದ್ , ಶೈಖುನಾ ಕೆ.ಎಂ ಇಬ್ರಾಹಿಂ ಪೈಝಿ ಕನ್ಯಾನ ಉಸ್ತಾದ್ , ಪೇರೋಡ್ ಮುಹಮ್ಮದ್ ಅಝ್ ಹರಿ ಉಸ್ತಾದ್ , ಕರ್ನಾಟಕ ರಾಜ್ಯ SSF ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಉಸ್ತಾದ್ ಕನ್ಯಾನ ಇನ್ನಿತರ ಉಲಮಾ‌ ಉಮರಾ ನಾಯಕರು ಭಾಗವಹಿಸಲಿದ್ದಾರೆ‌ ಎಂದು ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಕನ್ಯಾನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.