ಶಿವಮೊಗ್ಗ: 71ನೇ ಗಣರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಮರ್ಕಝ್ ಸಆದಃ ಸಂಸ್ಥೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
“ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ ಬಲುದೊಡ್ಡದು, ಮುಸ್ಲಿಮರಿಲ್ಲದೆ ನಮ್ಮ ದೇಶವು ಸ್ವಾತಂತ್ರ್ಯ ಪಡೆದಿಲ್ಲ, ಅದರ ಸಂವಿಧಾನವು ಇತರ ದೇಶಕ್ಕಿಂತ ಮಾದರಿಯೂ ವಿಭಿನ್ನವೂ ಆಗಿದೆ” ಎಂದು ಮರ್ಕಝ್ ಸಆದಃ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಲತೀಫ್ ಸಅದಿಯವರು ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡುತ್ತಾ ಹೇಳಿದರು.
“ಈ ದೇಶದ ಪವಿತ್ರ ಸಂವಿಧಾನವನ್ನು ಬದಲಾಯಿಸಿ, ಮುಸ್ಲಿಮರಿಲ್ಲದ ಭಾರತವನ್ನು ಯಾರೂ ಕನಸು ಕಾಣಬೇಕಾಗಿಲ್ಲ” ಎಂದು ನೆನಪಿಸಿದರು. ಸಂವಿಧಾನ ಉಳಿಸಿ ದೇಶವನ್ನು ರಕ್ಷಿಸಿ ಎಂಬ ಉದಾತ್ಥ ಸಂದೇಶವನ್ನು ನೀಡಿದರು.
ಧ್ವಜಾರೋಹಣವನ್ನು ಸಂಸ್ಥೆಯ ಹಿತೈಶಿಗಳಾದ ಇಸ್ಮಾಯಿಲ್ ಹಾಗೂ ಮುಹಮ್ಮದ್ ಅಮ್ಜದ್ ವಾದೀ ಹುದ ರವರು ನೆರವೇರಿಸಿದರು. ಸಂಸ್ಥೆಯ ಅಧ್ಯಾಪಕರಾದ ಸಾದಾತ್ ಶಿವಮೊಗ್ಗ ಸ್ವಾಗತಿಸಿದರು.ಸಂಸ್ಥೆಯ ಪ್ರಧಾನ ಮುದರ್ರಿಸರಾದ ಮುಹಮ್ಮದ್ ಸಯೀದ್ ಸಅದಿ ಅಲ್ ಅಫ್ಲಲಿ ವಂದಿಸಿದರು.ಅಧ್ಯಾಪಕರಾದ ಮುಹಮ್ಮದ್ ತೌಫೀಖ್ ಮುಈನಿ,ಅಶ್ರಫ್ ಶಿವಮೊಗ್ಗ, ಅಕ್ಬರ್ ಶಿವಮೊಗ್ಗ ಬಾಗವಹಿಸಿದ್ದರು.