janadhvani

Kannada Online News Paper

ಮಕ್ಕಾ: ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಆತ್ಮೀಯ ಮಜ್ಲಿಸ್ ಹಾಗೂ ಅಭಿನಂದನಾ ಸಮಾರಂಭ ಸೆಕ್ಟರ್ ಅಧ್ಯಕ್ಷರು ಉಮರುಲ್ ಫಾರೂಕ್ ಹನೀಫಿ ಬೋವು ರವರ ಅಧ್ಯಕ್ಷತೆಯಲ್ಲಿ ಜಬಲನ್ನೂರುನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯ SYS ನೂತನ ಅಧ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ ಮಾತನಾಡಿದರು. ಇದೇ ವೇಳೆ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಹಾಗೂ ಡಿಕೆಎಸ್ಸಿ ಮಕ್ಕಾ ಯೂನಿಟ್ ವತಿಯಿಂದ ಶಾಲು ಹೊದಿಸಿ ಉಸ್ತಾದರನ್ನು ಗೌರವಿಸಲಾಯಿತು. ನಂತರ ಕೆಸಿಎಫ್ ಸದಸ್ಯರ ನೂತನ ಐಡಿ ಕಾರ್ಡ್ ನ್ನು ಸೆಕ್ಟರ್ ಅಧ್ಯಕ್ಷರಿಗೆ ಕೊಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಸಂಘಟನೆ ಇಲಾಖೆ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಸೆಕ್ಟರ್ ಕೋಶಾಧಿಕಾರಿ ಮುಹಮ್ಮದ್ ಗಂಟಲ್ಕಟ್ಟೆ, ಸಾಂತ್ವನ ಇಲಾಖೆ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ, ಕಾರ್ಯದರ್ಶಿ ಅಬ್ದುಲ್ ಹಮೀದ್ ಉಳ್ಳಾಲ, ಸಂಘಟನೆ ಇಲಾಖೆ ಕಾರ್ಯದರ್ಶಿ ಅಬ್ದುಲ್ಲಾ ಕಿನ್ಯ, ಶಿಕ್ಷಣ ಇಲಾಖೆ ಅಧ್ಯಕ್ಷರು ಆರ್.ಕೆ ರಝ್ಝಾಖ್ ರಂತಡ್ಕ, ಸಿತ್ತೀನ್ ಯೂನಿಟ್ ಅಧ್ಯಕ್ಷರು ನಝೀರ್ ಸೂರಿಂಜೆ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಕರೋಪಾಡಿ, ಕುದೈ ಯೂನಿಟ್ ಕೋಶಾಧಿಕಾರಿ ಹನೀಫ್ ಕೋಳಿಯೂರು, ಕಾರ್ಯದರ್ಶಿ ಅಬ್ದುಲ್ ಲತೀಫ್ ನೆಲ್ಯಾಡಿ, ಅಬ್ದುಲ್ ಖಾದರ್ ಮಠ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
%d bloggers like this: