janadhvani

Kannada Online News Paper

ಜನವರಿ 23 ಮತ್ತು 24 ಯುಎಇ ಕೆಸಿಎಫ್ ಪ್ರತಿಭೋತ್ಸವ-2020 ಉತ್ಸವ ನಡಿಗೆ

ಯುಎಇಯಾದ್ಯಂತ ಫೀಲ್ಡಿಗಿಳಿಯಲಿದ್ದಾರೆ ಸಾವಿರದಷ್ಟು ಕೆಸಿಎಫ್ ಕಾರ್ಯಕರ್ತರು

ಜನವರಿ 31 ಶುಕ್ರವಾರ ಶಾರ್ಜಾ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ಪ್ರತಿಭೋತ್ಸವದ ಪ್ರಚಾರ ಕಾರ್ಯವು ಉತ್ಸವ ನಡಿಗೆ ಮೂಲಕ ಜನವರಿ 23 & 24 ಯುಎಇಯಾದ್ಯಂತ ನಡೆಯಲಿದೆ ಎಂದು ಸ್ವಾಗತ ಸಮಿತಿ ಚಯರ್ಮೆನ್ ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್ ತಿಳಿಸಿದ್ದಾರೆ.

4 ಸಾವಿರದಷ್ಟು ಬರುವ ಕೆಸಿಎಫ್ ಕಾರ್ಯಕರ್ತರು ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಕಂಡು ಅವರನ್ನು ಕಾರ್ಯಕ್ರಮಕ್ಕೆ ಅಹ್ವಾನ ನೀಡಲಿದ್ದಾರೆ. ಕೆಸಿಎಫ್ ನ ಸಾಮಾಜಿಕ ಚಟುವಟಿಕೆಗಳು ಸಮುದಾಯಸೇವೆಗಳು, ಶಿಕ್ಷಣ ಕ್ರಾಂತಿಗಳು ಎಲ್ಲೆಡೆ ಪ್ರಶಂಸನೀಯವಾಗಿದೆ. ಸಾಂಘಿಕ ಕಾರ್ಯಾಚರಣೆಯಲ್ಲಿ ಕೆಸಿಎಫ್ ನ ಯಶಸ್ವೀ ಹೆಜ್ಜೆಗಳು ಊರಿನ ಬಡವರ ನಿರ್ಗತಿಕ, ಅಸಾಹಾಯಕರ ಪಾಲಿಗೆ ಆಶಾದಾಯಕವಾಗಿದೆ ಎಂದು ಸ್ವಾಗತ ಸಮಿತಿ ಕನ್ವೀನರ್ ಇಕ್ಬಾಲ್ ಕಾಜೂರು ತಿಳಿಸಿದರು.

ಯುಎಇಯ ಏಳು ಎಮಿರೇಟ್ಸ್ ಗಳಿಂದ 250 ರಷ್ಟು ಪ್ರತಿಭೆಗಳು ಮೂವತ್ತಮೂರು ವಿಭಾಗಗಳಲ್ಲಿ ನಾಲ್ಕು ವೇದಿಕೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಏಳು ಭಾಷೆಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಹಲವಾರು ಕನ್ನಡ ಮತ್ತು ಬ್ಯಾರಿ, ಉರ್ದು ಕುಟುಂಬಗಳು ಭಾಗವಹಿಸಲಿದೆ. ಮಹಿಳೆಯರಿಗೆ ವಿಶೇಷವಾಗಿ ಪುಡ್ಡಿಂಗ್ (ಸ್ವೀಟ್ & ಸ್ಪೈಸಿ) ಬೆಸ್ಟ್ ಔಟ್ ಓಫ್ ವೇಸ್ಟ್, ರಸಪ್ರಶ್ನೆ ವಿಭಾಗಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಅದರ ಓನ್ಲೈನ್ ರಿಜೆಸ್ಟ್ರೇಶನ್ ಗೆ ಹೊಸ ಲಿಂಕನ್ನು ಕೂಡ ಬಿಡುಗಡೆ ಮಾಡಿದೆ. (ಲಿಂಕ್ ಕೆಳಗೆ ನೀಡಲಾಗಿದೆ) ಯುಎಇಯ ಯಾವುದೇ ಮೂಲೆಯಿಂದಲೂ ಭಾಗವಹಿಸಬಹುದು ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯುಎಇಯ ಎಲ್ಲಾ ಕನ್ನಡಿಗರಿಗೂ ಪ್ರತಿಭೋತ್ಸವ ದ ಸಂದೇಶವನ್ನು ತಲುಪಿಸುವ ಸಲುವಾಗಿ ಕೆಸಿಎಫ್ ಕಾರ್ಯಕರ್ತರು ಜನವರಿ 23 ಮತ್ತು 24 ರಂದು ಯುಎಇಯ ಗಲ್ಲಿ ಗಲ್ಲಿಗಳಲ್ಲಿ ಬೀದಿಗಳಲ್ಲಿ ಪಾರ್ಕ್ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮಹಿಳೆಯರು ಭಾಗವಹಿಸಲು ರಿಜಿಸ್ಟರ್ ಮಾಡಬೇಕಾದ ಲಿಂಕ್
https://docs.google.com/forms/d/e/1FAIpQLSe8E2i0Detnxj31Df_XojAVLDgsHsdmNqF8PfYulmokElAxMQ/viewform

error: Content is protected !! Not allowed copy content from janadhvani.com