janadhvani

Kannada Online News Paper

ದೋಹಾ: ಏರ್ ಇಂಡಿಯಾ ಸಂಸ್ಥೆಯು ದೋಹಾದಿಂದ ಮುಂಬೈಗೆ ಹೊಸ ಸೇವೆಯನ್ನು ಪ್ರಾರಂಭಿಸಲಿದೆ. ವಾರದಲ್ಲಿ ಮೂರು ದಿನ ಹೊಸ ಸೇವೆ ಲಭ್ಯವಿದ್ದು, ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಇಂಡಿಯಾ ತನ್ನ ಹೊಸ ಸೇವೆಯನ್ನು ದೋಹಾ ಮುಂಬೈ ವಲಯದಲ್ಲಿ ಫೆಬ್ರವರಿ 21ರಿಂದ ಪ್ರಾರಂಭಿಸಲಿದೆ. ವಾರದ ಶುಕ್ರವಾರ, ರವಿವಾರ ಮತ್ತು ಮಂಗಳವಾರ ಸೇವೆ ಲಭ್ಯವಾಗಲಿದೆ. ಮಧ್ಯಾಹ್ನ 12:45 ಕ್ಕೆ ದೋಹಾದಿಂದ ಹೊರಟು ಭಾರತೀಯ ಸಮಯ ಸಂಜೆ 6:45 ಕ್ಕೆ ಮುಂಬೈಗೆ ತಲುಪಲಿದೆ.

ಈ ವಿಮಾನ ಮುಂಬೈಯಿಂದ ಬೆಳಗ್ಗೆ 10:20 ಕ್ಕೆ ಹೊರಟು ಖತರ್ ಸಮಯ ಮಧ್ಯಾಹ್ನ 11:15 ಕ್ಕೆ ದೋಹಾ ತಲುಪಲಿದೆ. ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಮಾರ್ಚ್ ಅಂತ್ಯದ ವೇಳೆಗೆ ಸೇವೆಯ ಸಮಯದಲ್ಲಿ ಬದಲಾವಣೆ ಉಂಟಾಗಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಸ್ತುತ ದೋಹಾ ಮುಂಬೈ ವಲಯದಲ್ಲಿ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸುತ್ತಿದೆ. ಇದರ ಹೊರತಾಗಿ ಏರ್ ಇಂಡಿಯಾದ ಹೊಸ ಸೇವೆ ಪ್ರಾರಂಭಗೊಂಡಿದ್ದು, ಹೊಸ ಸೇವೆಗಾಗಿ ಟಿಕೆಟ್ ಕಾಯ್ದಿರಿಸುವಿಕೆ ಈಗಾಗಲೇ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ದೋಹಾದಿಂದ ಮುಂಬೈಗೆ 735 ರಿಯಾಲ್ ಮತ್ತು ಮುಂಬೈನಿಂದ ದೋಹಾಕ್ಕೆ 785 ರಿಯಾಲ್ ನಿಗದಿಪಡಿಸಲಾಗಿದೆ.

error: Content is protected !!
%d bloggers like this: