ದುಬೈ: ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಭಾರತೀಯ ಅನಿವಾಸಿಗಳಿಗೆ ಅದೇ ದಿವಸ ಪಾಸ್‌ಪೋರ್ಟ್ ನೀಡಲಾಗುವುದು ಎಂದು ದುಬೈ ಭಾರತೀಯ ದೂತಾವಾಸ ತಿಳಿಸಿದೆ.
ಕಾನ್ಸುಲೇಟ್‌ನಲ್ಲಿ ನಡೆಯುವ ಓಪನ್ ಹೌಸ್ ನಡೆಯುವ ಸ್ಥಳವನ್ನು ಪ್ರವಾಸಿ ಭಾರತೀಯ ಸಹಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಾನ್ಸುಲ್ ಜನರಲ್ ತಿಳಿಸಿದ್ದಾರೆ. ದುಬೈನ ಭಾರತೀಯ ದೂತಾವಾಸದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದಲ್ಲಿ ಕಾನ್ಸುಲ್ ಜನರಲ್ ವಿಪುಲ್ ಈ ಘೋಷಣೆ ಮಾಡಿದ್ದಾರೆ.
ಪ್ರಸ್ತುತ ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ 24 ಗಂಟೆಗಳ ಒಳಗೆ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ಬೆಳಿಗ್ಗೆ ಬಿಎಲ್‌ಎಸ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದರೆ ಸಂಜೆ ಪಾಸ್‌ಪೋರ್ಟ್ ಲಭಿಸಲಿದೆ. ಆನ್‌ಲೈನ್ ಅರ್ಜಿ ವ್ಯವಸ್ಥೆಯೊಂದಿಗೆ, ಸಾಮಾನ್ಯ ಅರ್ಜಿದಾರರಿಗೆ ಕೂಡ ಪಾಸ್‌ಪೋರ್ಟ್‌ಗಳನ್ನು ಮೂರು ದಿನಗಳಲ್ಲಿ ವಿತರಿಸಲು ಸಾಧ್ಯವಾಗುತ್ತಿದೆ. ದೂತಾವಾಸವು ದಿನಕ್ಕೆ ಸರಾಸರಿ 850 ಪಾಸ್‌ಪೋರ್ಟ್ ಅರ್ಜಿಗಳನ್ನು ಸ್ವೀಕರಿಸುತ್ತಿದೆ.
ದುಬೈ ಕಾನ್ಸುಲೇಟ್‌ನಲ್ಲಿ ಆಯೋಜಿಸಲಾಗುತ್ತಿದ್ದ ಓಪನ್ ಹೌಸ್‌ನ ಸ್ಥಳವನ್ನು ಜುಮೈರಾದ ಟವರ್ಸ್‌ನಲ್ಲಿರುವ ಭಾರತೀಯ ಸಹಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಪ್ರತೀ ತಿಂಗಳ ಕೊನೆಯ ಶುಕ್ರವಾರ ಓಪನ್ ಹೌಸ್ ನಡೆಸಲಾಗುತ್ತಿದ್ದು, ಪ್ರವಾಸಿ ಭಾರತೀಯ ಪ್ರಶಸ್ತಿ ಪುರಸ್ಕೃತ ಡಾ. ಆಝಾದ್ ಮೂಪನ್ ಸಹಿತ ಹಿರಿಯರು, ಆರು ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.






