ರಿಯಾದ್: ಸೌದಿಯಲ್ಲಿ, ಚಾಲಕ ರಹಿತ ಬಸ್ಗಳ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಜಿದ್ದಾದ ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಗಿದ್ದು, ಮುಂದಿನ ವರ್ಷದಿಂದ ಈ ಬಸ್ಗಳ ಸೇವೆ ಲಭ್ಯವಾಗಲಿದೆ.
ಕಂಪ್ಯೂಟರ್ ಸಂಪರ್ಕಿತ ಬಸ್ಗಳನ್ನು ಬ್ಯಾಟರಿಯಲ್ಲಿ ಚಲಾಯಿಸಲಾಗುತ್ತದೆ. ಒಲ್ಲಿ ಮತ್ತು ಇಝೆಡ್ 10 ಎಂಬ ಹೆಸರುಗಳ ಸ್ವಯಂಚಾಲಿತ ಬಸ್ಗಳ ಪ್ರಾಯೋಗಿಕ ಓಟವು ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು.
ಬಸ್ ಕ್ಯಾಮೆರಾ ಮತ್ತು ಸಂವೇದಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ.
3 ಡಿ ಮುದ್ರಿತ ಬಾಡಿಯಲ್ಲಿ ಬಸ್ ತಯಾರಿಸಲಾಗಿದೆ. ನಿರ್ಮಾಣ ಸುಲಭವಾದ ಕಾರಣ ಅಂತಹ ವಾಹನಗಳನ್ನು ನಿರ್ಮಿಸಲು ಯಾವುದೇ ವಿಳಂಬವಿಲ್ಲ ಎಂದು ಭಾಗಿಯಾಗಿರುವವರು ಹೇಳುತ್ತಾರೆ. ಮುಂದಿನ ವರ್ಷದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಈ ಬಸ್ಗಳನ್ನು ಬಳಸಲು ಯೋಜಿಸಲಾಗಿದೆ. ಡಿಜಿಟಲ್ ವಾಹನ ತಯಾರಕರಾದ ಲೋಕಲ್ ಮೋಟಾರ್ಸ್ ಇಂಡಸ್ಟ್ರೀಸ್, ಇಸಿ ಮೈಲ್ ಮತ್ತು ಸೌದಿ ಸಾರ್ವಜನಿಕ ಸಾರಿಗೆ ಕಂಪನಿಯ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ