ಆಡಳಿತ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆ ಯಲ್ಲಿ ಗೆಲ್ಲುವುದು ಸಹಜ-ಡಿ.ಕೆ.ಶಿ

ಬೆಂಗಳೂರು,ಡಿ.9: ಜನತಾ ನ್ಯಾಯಾಲಯದಲ್ಲಿ ಅನರ್ಹರ ಪರವಾಗಿ ತೀರ್ಪು ಬಂದಿದೆ. ಮತದಾರರು ಅನರ್ಹರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ. ಸಾಮಾನ್ಯವಾಗಿ ಆಡಳಿತ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆ ಯಲ್ಲಿ ಗೆಲ್ಲುವುದು ಸಹಜ. ಈಗಲೂ ಅದೇ ರೀತಿ ಆಗಿದೆ ಎಂದರು.

ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಯಾರು ಭಾವಿಸಬೇಕಿಲ್ಲ. ಉಪಚುನಾವಣೆ ಗಳೇ ಬೇರೆ ಸಾರ್ವತ್ರಿಕ ಚುನಾವಣೆ ಗಳೇ ಬೇರೆ.. ಪಕ್ಷವನ್ನು ಸಂಘಟಿಸುವತ್ತ ನಾವು ಗಮನಹರಿಸುತ್ತೇವೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

ಈ ಚುನಾವಣೆಯ ಫಲಿತಾಂಶದ ಬಗ್ಗೆ ಕಾರ್ಯಕರ್ತರು ಹೆಚ್ಚು ತಲೆಕೆಡಿಸಿಕೊಂಳ್ಳದೇ ಪಕ್ಷವನ್ನು ಸದೃಢ ಹಾಗೂ ಗಟ್ಟಿಗೊಳ್ಳಿಸಲು ಬೇರು ಮಟ್ಟದಿಂದಲೇ ಪ್ರಯತ್ನ ನಡೆಸಬೇಕಾಗಿದೆ ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!