ಕೆಲವು ಹುದ್ದೆಗಳಲ್ಲಿ ವಿದೇಶಿಯರಿಗೆ ನಿಷೇಧ- ಬಹ್ರೈನ್ ಸಂಸತ್ತಿನ ಅಂಗೀಕಾರ

ಮನಾಮ: ಕೆಲವು ಹುದ್ದೆಗಳಲ್ಲಿ ವಿದೇಶಿಯರನ್ನು ನಿಷೇಧಿಸುವ ನಿರ್ಣಯಕ್ಕೆ ಬಹ್ರೈನ್ ಸಂಸತ್ತು ಅಂಗೀಕಾರ ನೀಡಿದೆ. ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನವು ಶೂರಾ ಕೌನ್ಸಿಲ್ ಮತ್ತು ರಾಜನ ಅನುಮೋದನೆಗೆ ಒಳಪಟ್ಟಿರುತ್ತದೆ.

ನಿರುದ್ಯೋಗ ದರವನ್ನು ಕಡಿಮೆಗೊಳಿಸಲು ಸರಕಾರಿ ವಲಯದಲ್ಲಿ ಸ್ಥಳೀಯ ಜನರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಬೇಡಿಕೆಗೆ ಸ್ಪಂದಿಸುವ ಸಲುವಾಗಿ ಹೊಸ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಸಂಸತ್ತಿನ ಸದಸ್ಯರು ಕೆಲವು ಉದ್ಯೋಗಗಳಲ್ಲಿ ವಿದೇಶಿಯರನ್ನು ನೇಮಕ ಮಾಡುವುದನ್ನು ನಿಷೇಧಿಸುವ ಪರವಾಗಿ ಮತ ಚಲಾಯಿಸಿದರು.

ಸಂಸದ ಆದಿಲ್ ಅಲ್-ಅಸೂಮಿ ವಿದೇಶಿಯರನ್ನು ಸಾರ್ವಜನಿಕ ವಲಯದ ಉದ್ಯೋಗದಿಂದ ಒಂದು ವರ್ಷ ನಿರ್ಬಂಧಿಸಬೇಕೆಂದು ಕರೆ ನೀಡಿದರು. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯ ವಲಯದಲ್ಲಿ ಉದ್ಯೋಗಗಳನ್ನು ಪೂರ್ಣವಾಗಿ ಸ್ವದೇಶೀಕರಿಸುವಂತೆ ಒತ್ತಾಯಿಸುವ ನಿರ್ಣಯದ ಪರವಾಗಿ ಸಂಸದರು ಇತ್ತೀಚೆಗೆ ಮತ ಚಲಾಯಿಸಿದ್ದಾರೆ.

ಪ್ರಸ್ತುತ ಶೇಕಡಾ 85 ರಷ್ಟು ಉದ್ಯೋಗಗಳನ್ನು ಸ್ವದೇಶೀಕರಣಗೊಳಿಸಿ ಸಂಪೂರ್ಣವಾಗಿ ಜಾರಿಗೆ ತರಲಾಗಿವೆ. ಆದಾಗ್ಯೂ, ದೇಶದ ನಿರುದ್ಯೋಗವನ್ನು ಸಂಪೂರ್ಣವಾಗಿ ಪರಿಹರಿಸುವವರೆಗೆ ಪ್ರಯತ್ನಗಳನ್ನು ತೀವ್ರಗೊಳಿಸುವುದು ಸಂಸತ್ತಿನಲ್ಲಿನ ಬೇಡಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!