ಸೌದಿ: ನಿರ್ಗಮನ ವೀಸಾ ಪಡೆದು ನಿರ್ಗಮಿಸದಿದ್ದಲ್ಲಿ 1000 ರಿಯಾಲ್ ದಂಡ

ರಿಯಾದ್: ಅಂತಿಮ ನಿರ್ಗಮನ ವೀಸಾವನ್ನು ಪಡೆದು ಸೌದಿ ಅರೇಬಿಯಾದಿಂದ ನಿರ್ಗಮಿಸದಿದ್ದರೆ 1,000 ರಿಯಾಲ್ ವರೆಗೆ ದಂಡ.

ಪ್ರಸಕ್ತ ಕಾನೂನಿನಲ್ಲಿ ದೇಶದಿಂದ ಎರಡು ತಿಂಗಳೊಳಗೆ ಹೊರಹೋಗಬೇಕು. ಈ ಅವಧಿಯು ಮುಗಿದಲ್ಲಿ ದಂಡ ಪಾವತಿಸಿದರೆ ಮಾತ್ರ ವೀಸಾವನ್ನು ರದ್ದುಗೊಳಿಸಬಹುದು ಮತ್ತು ಹೊಸ ನಿರ್ಗಮನ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

ಇಕಾಮಾ (ನಿವಾಸ ಪರವಾನಗಿ) ಅವಧಿ ಮುಗಿಯದಿದ್ದಲ್ಲಿ ಮಾತ್ರ ಹೊಸ ನಿರ್ಗಮನ ವೀಸಾವನ್ನು ಪಡೆಯಬಹುದಾಗಿದೆ. ಇಕಾಮಾ ಅವಧಿ ಮೀರಿದ್ದರೆ ಮತ್ತು ನಿರ್ಗಮನ ವೀಸಾ ಅವಧಿ ಮುಗಿದರೂ ಸಹ, ಅವರು ದೇಶದಲ್ಲಿಯೇ ಉಳಿದರೆ ಕಾನೂನು ಉಲ್ಲಂಘನೆಗಾಗಿ ಕಠಿಣ ದಂಡವನ್ನು ಎದುರಿಸಬೇಕಾಗುತ್ತದೆ.

ಮರು ಪ್ರವೇಶ ವೀಸಾ ಪಡೆದು ದೇಶವನ್ನು ತೊರೆದು ನಿಗದಿತ ಸಮಯಕ್ಕೆ ಹಿಂದಿರುಗುವುದಿಲ್ಲವಾದರೆ ಸೌದಿ ಅರೇಬಿಯಾಕ್ಕೆ ಮೂರು ವರ್ಷಗಳ ಪ್ರವೇಶವನ್ನು ನಿಷೇಧಿಸಲಾಗುತ್ತದೆ ಎಂದು ಪಾಸ್‌ಪೋರ್ಟ್‌ ನಿರ್ದೇಶನಾಲಯದ ಅಧಿಕಾರಿಗಳು (ಜವಾಝಾತ್) ಹೇಳಿದ್ದಾರೆ.

ಮರುಪ್ರವೇಶ ವೀಸಾ ಅವಧಿ ಮುಗಿದ ಎರಡು ತಿಂಗಳ ನಂತರ, ಜವಾಝಾತ್‌ನ ಕಂಪ್ಯೂಟರ್ ದಾಖಲೆಗಳಲ್ಲಿ ಕೆಂಪು ಗುರುತು ದಾಖಲಾಗುವುದು. ಅಂತಹ ಜನರನ್ನು ನಂತರ ದೇಶಕ್ಕೆ ಮರು ಪ್ರವೇಶಿಸುವ ವಿಧಾನದಿಂದ ನಿರ್ಬಂಧಿಸಲಾಗುತ್ತದೆ. ಹೊಸ ವೀಸಾ ಪಡೆದು ಮೂರು ವರ್ಷಗಳ ನಂತರ ದೇಶಕ್ಕೆ ಮರಳಬಹುದು. ಆದರೆ ಹಿಂದೆ ಇದ್ದ ಪ್ರಾಯೋಜಕರ ಅಡಿಯಲ್ಲಿ ಮಾತ್ರ ಅದನ್ನು ಅನುಮತಿಸಲಾಗುವುದು.

ಇಕಾಮಾ ಅವಧಿ ಮುಗಿದ ನಂತರ, ಅದನ್ನು ಮೂರು ದಿನಗಳವರೆಗೆ ದಂಡವಿಲ್ಲದೆ ನವೀಕರಿಸಬಹುದು. ಅದರ ನಂತರ 500 ರಿಯಾಲ್ ದಂಡ. ಇದು ಎರಡನೇ ಬಾರಿಗೆ ಸಂಭವಿಸಿದಲ್ಲಿ, ದಂಡವು 1,000 ರಿಯಾಲ್ ಆಗಿರುತ್ತದೆ. ಆದರೆ ಇದು ಮೂರನೇ ಬಾರಿಗೆ ಆವರ್ತನೆ ಗೊಂಡರೆ, ಗಡೀಪಾರು ಶಿಕ್ಷೆಗೆ ಗುರಿಯಾಗಬಹದು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!