janadhvani

Kannada Online News Paper

ವಾಟ್ಸ್ಆ್ಯಪ್ ಹೊಸ ಆವೃತ್ತಿಯಲ್ಲಿ ಬ್ಯಾಟರಿ ಸಮಸ್ಯೆ?

ಇತ್ತೀಚೆಗೆ ವಾಟ್ಸ್ಆ್ಯಪ್ ತನ್ನ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಆಪ್ಡೇಟ್​​​ವೊಂದನ್ನು ಬಿಡುಗಡೆ ಮಾಡಿತ್ತು. ಆದರೆ ನೂತನ ವರ್ಷನ್ ಇನ್​ಸ್ಟಾಲ್​​ ಮಾಡಿದ ಬಳಿಕ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆ ಎಂದು ಶಿಯೋಮಿ ಮತ್ತು ಒನ್​​ಪ್ಲಸ್​​​​ ಬಳಕೆದಾರರು ದೂರಿದ್ದಾರೆ.

ವಾಟ್ಸ್ಆ್ಯಪ್ 2.19.308 ಆವೃತ್ತಿಯನ್ನು ಬಳಸುತ್ತಿರುವ ಶಿಯೋಮಿ ಮತ್ತು ಒನ್​ಪ್ಲಸ್​ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಈ ಬಗ್ಗೆ ಶಿಯೋಮಿ ಅಥವಾ ಒನ್​ಪ್ಲಸ್​​​ ಕಂಪೆನಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನೂತನ ವರ್ಷನ್ ಬಳಸಿದಾಗ ಸ್ಮಾರ್ಟ್​ಫೋನ್​​ ಬ್ಯಾಟರಿ ಬೇಗ ಖಾಲಿಯಾಗಿ ಸಮಸ್ಯೆ ಉಂಟಾಗಿದೆ ಎಂದು ದೂರಿದ್ದಾರೆ.

ಈ ಹಿಂದೆ ಆ್ಯಂಡ್ರಾಯ್ಡ್ 9 ಪೈ ಮತ್ತು ಆ್ಯಂಡ್ರಾಯ್ಡ್ 10 ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಮಾತ್ರವಲ್ಲದೆ, ಒನ್​ಪ್ಲಸ್​​ 7ಟಿ ಸ್ಮಾರ್ಟ್​ಫೋನ್​ ಬಳಕೆದಾರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಇನ್ನು ಈ ಬಗ್ಗೆ ರೆಡ್​ಮಿ, ಗೂಗಲ್ ಪ್ಲೇ ಸ್ಟೋರ್, ಒನ್​​ಪ್ಲಸ್​ ಫೋರಂನಲ್ಲಿ ಬಳಕೆದಾರರು ಸಮಸ್ಯೆಯ ಕುರಿತು ಬರೆದುಕೊಂಡಿದ್ದಾರೆ.

error: Content is protected !! Not allowed copy content from janadhvani.com