ತನ್ನನ್ನು ಭೇಟಿಮಾಡುವಾಗ ಮೊಬೈಲ್ ತರದಂತೆ ಮುಖ್ಯ ಮಂತ್ರಿ ಬಿಎಸ್ವೈ ಆದೇಶ

ಬೆಂಗಳೂರು, ನ.5: ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಬ್ದವೆನ್ನಲಾದ ಆಡಿಯೋ ಒಂದು ಲೀಕ್ ಆದ ಪರಿಣಾಮ ಇನ್ನು ಮುಂದೆ ಯಾರೂ ಕೂಡಾ ಮುಖ್ಯ ಮಂತ್ರಿ ಅವರನ್ನು ಭೇಟಿಯಾಗುವಾಗ ಮೊಬೈಲ್ ಕೊಂಡೊಯ್ಯುವಂತಿಲ್ಲ.

ಪಕ್ಷದ ಮುಖಂಡರು , ಕಾರ್ಯಕರ್ತರು ಭೇಟಿಯಾಗುವ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ. ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ವೈ ನಿವಾಸದಲ್ಲಿ ಸಂದರ್ಶಕರಿಗೆ ಮೊಬೈಲ್ ಬಳಕೆ ನಿಷೇಧಿಸಿ ಬೋರ್ಡ್ ಹಾಕಲಾಗಿದೆ.ತಮ್ಮನ್ನು ಭೇಟಿಯಾಗಲು ಮನೆಗೆ ಬರುವಾಗ ಮೊಬೈಲ್ ತರದಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಪೊಲೀಸರಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ.

ಇನ್ನು ಮಂದೆ ಮೊಬೈಲ್ ಇಲ್ಲದಿರುವುದು ದೃಢಪಡಿಸಿದ ಬಳಿಕ ಪಕ್ಷದ ಮುಖಂಡರಿಗೆ , ಕಾರ್ಯಾಕರ್ತರಿಗೆ , ಸಾರ್ವಜನಿಕರಿಗೆ ಪೊಲೀಸರು ಸಿಎಂ ಭೇಟಿಗೆ ಅವಕಾಶ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!