janadhvani

Kannada Online News Paper

ಕೆ‌.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್: ಕನ್ನಡ ರಾಜ್ಯೋತ್ಸವ ಹಾಗೂ ಇಶಾರ ಅಭಿಯಾನಕ್ಕೆ ಚಾಲನೆ

ದಮ್ಮಾಮ್: ಗಲ್ಫ್ ರಾಷ್ಟ್ರಗಳಲ್ಲಿ ಪ್ರವಾಸಿಯಾಗಿ ಜೀವನ ನಡೆಸುತ್ತಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕೆ.ಸಿ.ಎಫ್ ನ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ನಡೆಸಲ್ಪಟ್ಟ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮುಬರ್ರಝ್ ನ ಬಜ್ಪೆ ಹೌಸ್ ನಲ್ಲಿ ನವಂಬರ್ 01 ರಂದು ಆಚರಿಸಲಾಯಿತು.

ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ಅಧ್ಯಕ್ಷರಾದ ಹಬೀಬ್ ಉಸ್ತಾದ್ ಮರ್ದಾಳ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಕಾರ್ಯಕ್ರಮದಲ್ಲಿ ಸೆಕ್ಟರ್ ಅಸ್ಸುಫ್ಪಾ ಟ್ಯೂಟರ್ ಇಬ್ರಾಹಿಂ ಸಅದಿ ಮಚ್ಚಂಪಾಡಿ ಯವರು ಮಾತನಾಡಿ, ಬಳಿಕ ಅದ್ಯಕ್ಷ ತೆ ಭಾಷಣ ಮಾಡಿದ ಹಬೀಬ್ ಉಸ್ತಾದ್ ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾದದ್ದು, ಎಂದು ಸವಿಸ್ತಾರವಾಗಿ ವಿವರಿಸುತ್ತಾ ಕರ್ನಾಟಕದ ಏಕೀಕರಣ ದಲ್ಲಿ ಭಾಗವಹಿಸಿದವರನ್ನು ಸ್ಮರಿಸಿದರು.

ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಫಾರೂಕ್ ಸ ಅದಿ ಭಾಗವಹಿಸಿದ್ದರು, ಹುಫೂಫು ಯುನಿಟ್ ಅಧ್ಯಕ್ಷ ಅಬೂಬಕ್ಕರ್ ಕಿಲ್ಲೂರು, ಮುಬರ್ರಝ್ ಯುನಿಟ್ ಅಧ್ಯಕ್ಷ ಅಬ್ದುಲ್ಲಾ ಪುಲಾಬೆ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಸೆಕ್ಟರ್ ಶಿಕ್ಷಣ ವಿಭಾಗ ಕಾರ್ಯದರ್ಶಿ ಅಶ್ರಫ್ ಕಟ್ಟದಪಡ್ಪು ಸ್ವಾಗತಿಸಿ, ಶರೀಫ್ ಉಳ್ತೂರು ವಂದಿಸಿದರು.

ಬಳಿಕ ನಡೆದ ಇಶಾರ 2020 ಅಭಿಯಾನಕ್ಕೆ ರಾಷ್ಟ್ರೀಯ ಪಬ್ಲಿಷಿಂಗ್ ವಿಂಗ್ ಕಾರ್ಯದರ್ಶಿ ಅಶ್ರು ಬಜ್ಪೆ ಬಾಯರ್ ಹಾಜಿಯವರಿಗೆ ಇಶಾರ ವನ್ನು ನೀಡಿ ಚಾಲನೆ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಕೆ.ಸಿ.ಎಫ್ ದಮ್ಮಾಮ್ ಝೋನ್ ನೇತಾರ ಇಕ್ಬಾಲ್ ಜಿ.ಕೆ ಗುಲ್ವಾಡಿ ಹಾಗೂ ಹಲವಾರು ಕೆ.ಸಿ.ಎಪ್ ನ ಕಾರ್ಯಕರ್ತರು ಉಪಸ್ಥಿತಿಯಿದ್ದರು.

error: Content is protected !! Not allowed copy content from janadhvani.com