ಎಸ್‌ಎಸ್‌ಎಫ್ ಸುಳ್ಯ ಡಿವಿಷನ್: “ಮರ್ಹಬಾ ಯಾ ರಬೀಅ್” ಮೀಲಾದ್ ಕಾಲ್ನಡಿಗೆ ಜಾಥಾ

ಸುಳ್ಯ: ಲೋಕನೇತಾರರಾದ ಹಝ್ರತ್ ಮುಹಮ್ಮದ್ ಪೈಗಂಬರ್(ಸ) ರವರ ಜನ್ಮದಿನಾಚರಣೆ, ಎ.ಪಿ.ಉಸ್ತಾದರ ಕರ್ನಾಟಕ ಯಾತ್ರೆಯ ಐದನೇ ವರ್ಷದ ಸವಿನೆನಪು ಹಾಗೂ ನ. 7ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಎಸ್‌.ಎಸ್‌.ಎಫ್ ಸುಳ್ಯ ಡಿವಿಷನ್ ವತಿಯಿಂದ ಮೊಗರ್ಪಣೆಯಿಂದ ಗಾಂಧಿನಗರ ವರೆಗೆ ಮರ್ ಹಬಾ ಯಾ ರಬೀಅ್ ಬೃಹತ್ ಮೀಲಾದ್ ಜಾಥಾ ಕಾರ್ಯಕ್ರಮವು ನಡೆಯಿತು.

ಸುನ್ನೀ ಜಂಇಯ್ಯತ್ತುಲ್ ಉಲಮಾ ತಾಲೂಕು ಸಮಿತಿ ಅಧ್ಯಕ್ಷರಾದ ಅಸಯ್ಯದ್ ಕುಂಞಿಕೋಯ ಸಅದಿ ತಂಞಳ್ ಹಾಗೂ ಮೊಗರ್ಪಣೆ ಮಸೀದಿಯ ಖತೀಬರಾದ ಅಹಮ್ಮದ್ ಸಖಾಫಿರವರು ಮಾಂಬಿಳಿ ಮಖಾಂ ಝಿಯಾರತ್ತಿಗೆ ನೇತೃತ್ವ ನೀಡಿ ಧ್ವಜವನ್ನು ಹಸ್ತಾಂತರಿಸಿ ಜಾಥಾಗೆ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ಸುನ್ನೀ ಸಂಘಟನೆಗಳ ನಾಯಕರುಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಸನ್ ಸಖಾಫಿ ಬೆಳ್ಳಾರೆ, ಯೂಸುಫ್ ಹಾಜಿ ಬಿಳಿಯಾರು, ಎ.ಬಿ.ಅಶ್ರಫ್ ಸಅದಿ, ಅಂದುಂಞಿ ಗೋರಡ್ಕ, ಝೈನುಲ್ ಅಬಿದೀನ್ ತಂಙಳ್ ಜಯನಗರ, ಲತೀಫ್ ಸಖಾಫಿ ಮಾಡನ್ನೂರು, ಲತೀಫ್ ಸಖಾಫಿ ಗೂನಡ್ಕ, ಮಹಮ್ಮದ್ ಆಲಿ ಸಖಾಫಿ ಗೂನಡ್ಕ, ಸಿದ್ದೀಕ್ ಕಟ್ಟೆಕ್ಕಾರ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಶಮೀರ್ ಮೊಗರ್ಪಣೆ, ಮೂಸಾ ಪೈಂಬಚ್ಚಾಲ್, ಸಿದ್ದೀಕ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

ಕೊನೆಯಲ್ಲಿ ಗಾಂಧಿನಗರ ಪೆಟ್ರೋಲ್ ಪಂಪ್‌ನ ಮುಂಭಾಗ ಹುಬ್ಬುರ್ರಸೂಲ್ ಸಂದೇಶ ಭಾಷಣವು ನಡೆಯಿತು. ಎಸ್‌ಎಸ್‌ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ ಮುಖ್ಯ ಪ್ರಭಾಷಣ ನಡೆಸಿದರು. ಸುಳ್ಯ ಡಿವಿಷನ್ ಎಸ್‌.ಎಸ್‌.ಎಫ್‌ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆ ವಹಿಸಿದರು. ನ.ಪಂ. ಸದಸ್ಯರುಗಳಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಾಜ್ಯ ಎಸ್.ಎಸ್.ಎಫ್ ಕೋಶಾಧಿಕಾರಿ ರವೂಫ್ ಖಾನ್ ಮೂಡುಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು. ಡಿವಿಷನ್ ಉಪಾಧ್ಯಕ್ಷ ಫೈಝಲ್ ಝುಹರಿ ಸ್ವಾಗತಿಸಿ, ಡಿವಿಷನ್ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವಂದಿಸಿದರು. ಜಾಥಾದಲ್ಲಿ ಎಸ್‌.ಬಿ.ಎಸ್ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನವು ನಡೆಯಿತು.

ಸುಮಾರು 500ಕ್ಕೂ ಹೆಚ್ಚು ಎಸ್‌ಎಸ್‌ಎಫ್ ಮತ್ತು ಸಹಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!