ಕಾಶ್ಮೀರ ಇನ್ನು ನೆನಪು ಮಾತ್ರ: ಕೇಂದ್ರಾಡಳಿತ ರಾಜ್ಯಗಳಾಗಿ ವಿಭಜಿಸುವ ನಿರ್ಧಾರ ಜಾರಿಗೆ

ನವದೆಹಲಿ.ನ,1: 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರತ್ಯೇಕಿಸುವ ಕೇಂದ್ರ ಸರ್ಕಾರದ ನಿರ್ಧಾರ ಇಂದಿನಿಂದ ಜಾರಿಯಾಗಿದೆ. ಇಂದಿನಿಂದ, ಜಮ್ಮು ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಈ ಪೈಕಿ ಲಡಾಖ್ ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿರಲಿದೆ. ಜಮ್ಮು ಹೆಚ್ಚು ಅಧಿಕಾರವಿರುವ ರಾಜ್ಯವಾಗಲಿದೆ.

ಜಮ್ಮುವು ವಿಧಾನಸಭೆ ಇರುವ ಪುದುಚೇರಿಯಂತಹ ರಾಜ್ಯವಾಗಲಿದ್ದು, ಲಡಾಖ್ ಚಂಡೀಗಢದಂತಹ ಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ. ಎರಡೂ ಪ್ರಾಂತ್ಯಗಳ ಆಡಳಿತಾಧಿಕಾರಿಯಾಗಿ ಲೆಫ್ಟಿನೆಂಟ್ ಗವರ್ನರ್‌ಗಳಾಗಿರುತ್ತಾರೆ.
ಗಿರೀಶ್ ಚಂದ್ರ ಮುರ್ಮು ಇಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಲಗೈಯಾಗಿ ಗುರುತಿಸಿಕೊಂಡ ಅವರು, ಪ್ರಥಮ ಲಫ್.ಗವರ್ನರ್ ಆಗಿ ಇತಿಹಾಸದಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಲಡಾಖ್‌ನಲ್ಲಿ ಆರ್.ಕೆ.ಮಾಥುರ್ ಅವರು ಲಫ್-ಗವರ್ನರ್ ಆಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ರಾಜ್ಯದಲ್ಲಿ ಪ್ರಮುಖ ನಿರ್ಬಂಧಗಳನ್ನು ವಿಧಿಸಲಾಯಿತು. ಎರಡು ತಿಂಗಳ ನಂತರ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡರೂ, ಕಾಶ್ಮೀರದ ವರದಿಗಳು ಇದನ್ನು ನಿರಾಕರಿಸುತ್ತವೆ. ಕಾಶ್ಮೀರದ ಶೇಕಡಾ 20 ರಷ್ಟು ವಿದ್ಯಾರ್ಥಿಗಳು ಮಾತ್ರ ಇನ್ನೂ ಶಾಲೆಗೆ ಹೋಗುತ್ತಿದ್ದಾರೆಂದು ಇತ್ತೀಚೆಗೆ ಬಹಿರಂಗವಾಗಿತ್ತು.

370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕೇಂದ್ರ ಸರಕಾರವು ಆಗಸ್ಟ್ 5 ರಿಂದ ಕಾಶ್ಮೀರದಲ್ಲಿ ಸಾರಿಗೆ ವ್ಯವಸ್ಥೆ ಮತ್ತು ಮೊಬೈಲ್ ಫೋನ್‌ಗೆ ನಿರ್ಬಂಧ ಹೇರಿತ್ತು. ಕಳೆದ ವಾರ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಇದಲ್ಲದೆ, ದೇಶದ ವಿರೋಧ ಪಕ್ಷದ ನಾಯಕರು ಮತ್ತು ಪ್ರತಿಪಕ್ಷ ಸಂಸದರು ಕಾಶ್ಮೀರಕ್ಕೆ ಹೋಗುವುದಕ್ಕಿರುವ ನಿಷೇಧವನ್ನು ಮುಂದುವರಿಸಲಾಗಿದೆ. ಆದರೆ, ಕಳೆದ ವಾರ ಯೂರೋಪಿಯನ್ ಯೂನಿಯನ್‌ನ ಸಂಸದರಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರವು ಅನುಮತಿ ನೀಡಿತು.

ಕಳೆದ ಆಗಸ್ಟ್ 5 ರಂದು ಕಾಶ್ಮೀರವನ್ನು ಇಬ್ಬಾಗವಾಗಿಸುವ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿತು. ಈ ವಿಭಜನಾ ನಿರ್ಧಾರವನ್ನು 86 ದಿನಗಳ ನಂತರ ಇಂದು ಜಾರಿಗೆ ತರಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!