ಸೌದಿ: ಕೈವಶವಿರುವ ಹೆಚ್ಚುವರಿ ಹಣವನ್ನು ಬಹಿರಂಗಪಡಿಸದವರ ವಿರುದ್ಧ ಕ್ರಮ

ರಿಯಾದ್: ಹೆಚ್ಚುವರಿ ಹಣವನ್ನು ಬಹಿರಂಗಪಡಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಸೌದಿ ಅರೇಬಿಯಾ ನಿರ್ಧರಿಸಿದೆ. ಸೌದಿ ಅರೇಬಿಯಾದಿಂದ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ರಸ್ತೆ ಮಾರ್ಗವಾಗಿ ಪ್ರಯಾಣಿಸುವಾಗ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ಹೊಂದಿರುವ ಹಣದ ಬಗ್ಗೆ ಬಹಿರಂಗಪಡಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ 778 ಪ್ರಕರಣಗಳನ್ನು ತನಿಖೆ ನಡೆಸಲಾಗಿದೆ ಎಂದು ರಾಷ್ಟ್ರೀಯ ಗುಪ್ತಚರ ಸಂಸ್ಥೆ ತಿಳಿಸಿದೆ.

ಕೈವಶವಿರುವ 60 ಸಾವಿರ ರಿಯಾಲ್ ಅಥವಾ ಅದಕ್ಕಿಂತ ಹೆಚ್ಚಿನ ಹಣ, ಚಿನ್ನದ ಬಿಸ್ಕತ್ತುಗಳು, ಆಭರಣಗಳು ಮತ್ತು ಪ್ರಯಾಣಿಕರ ಚೆಕ್‌ಗಳನ್ನು ವಿಶೇಷ ಫೋರಂನಲ್ಲಿ ಭರ್ತಿ ಮಾಡಿ ಮುಂಚಿತವಾಗಿ ಬಹಿರಂಗಪಡಿಸಬೇಕು ಎಂಬುದು ವ್ಯವಸ್ಥೆಯಾಗಿದೆ.

ಕಪ್ಪುಹಣ ಸೇರಿದಂತೆ ತೆರಿಗೆ ವಂಚನೆಯನ್ನು ತಡೆಯುವುದು ಈ ಕ್ರಮದ ಹಿಂದಿನ ಉದ್ದೇಶ ಎನ್ನಲಾಗಿದೆ. ಇದನ್ನು ಬಹಿರಂಗಪಡಿಸದ ಪ್ರಯಾಣಿಕರ ಮೇಲಿನ ಪ್ರಕರಣಗಳನ್ನು ಕಸ್ಟಮ್ಸ್ ‌ಗೆ ರವಾನಿಸಲಾಗುತ್ತದೆ ಮತ್ತು ಸಂಬಂಧಪಟ್ಟ ಭದ್ರತಾ ಇಲಾಖೆಗಳಿಗೆ ಸೂಚಿಸಲಾಗುತ್ತದೆ.

ಕಳೆದ ವರ್ಷ, 27,622 ಜನರು ಫೋರಂ ಅನ್ನು ಭರ್ತಿ ಮಾಡಿದ್ದರು. ಅದೇ ರೀತಿ 3,000 ರಿಯಾಲ್‌ಗಿಂತ ಹೆಚ್ಚಿನ ಸರಕುಗಳ ಮತ್ತು ಆಯ್ದ ತೆರಿಗೆ ಅನ್ವಯವಾಗುವ ಉತ್ಪನ್ನಗಳ ಬಗ್ಗೆ ಬಹಿರಂಗ ಪಡಿಸುವ ಅಗತ್ಯವಿದೆ.

ಈ ಫಾರ್ಮ್ ಅನ್ನು ಭರ್ತಿ ಮಾಡದವರಿಗೆ ಅವರು ಹೊಂದಿರುವ ಹಣದ 25% ಗೆ ಸಮಾನವಾದ ದಂಡವನ್ನು ವಿಧಿಸಲಾಗುತ್ತದೆ. ಮನಿ ಲಾಂಡರಿಂಗ್ ಅಥವಾ ಕ್ರಿಮಿನಲ್ ಚಟುವಟಿಕೆಯ ಬಗ್ಗೆ ಅನುಮಾನವಿದ್ದರೆ, ಸಂಪೂರ್ಣ ಮೊತ್ತವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಮನಿ ಲಾಂಡರಿಂಗ್‌ಗೂ ಅವರ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಇದು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾವ ಅಪರಾಧವಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ದ್ವಿಗುಣವಾಗಿರುತ್ತದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!