ಅಲ್​ ಬಗ್ದಾದಿ ಸಾವಿನ ಬಗ್ಗೆ ರಷ್ಯಾ ಅನುಮಾನ

ಸಿರಿಯಾ: ಉತ್ತರ ಸಿರಿಯಾದಲ್ಲಿ ಅಮೆರಿಕ ಸೇನಾಪಡೆ ನಡೆಸಿದ ಕ್ಷಿಪ್ರಕಾರ್ಯಾಚರಣೆಯಲ್ಲಿ ಐಸಿಸ್​ ಉಗ್ರಸಂಘಟನೆಯ ಮುಖ್ಯಸ್ಥ ಅಬುಬಕರ್​ ಅಲ್​ ಬಾಗ್ದಾದಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸತ್ತಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದರು. ಆದರೆ ಈ ಬಗ್ಗೆ ರಷ್ಯಾ ಅನುಮಾನ ವ್ಯಕ್ತಪಡಿಸಿದೆ.

ಅಬುಬಕರ್​ ಅಲ್​ ಬಾಗ್ದಾದಿ ಸಾವಿನ ಬಗ್ಗೆ ಈ ಹಿಂದೆ ಕೂಡ ಹತ್ತುಹಲವು ಬಾರಿ ವರದಿಯಾಗಿದೆ. 2014ರಿಂದಲೂ ಅನೇಕ ಸಲ ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಲೇ ಬರಲಾಗಿತ್ತು. ಆದರೆ ಆ ವರದಿಯನ್ನು ಸುಳ್ಳಾಗಿಸುವಂತೆ ಯಾವಾಗಾದರೊಮ್ಮೆ ಆತ ಮಾತನಾಡಿದ್ದಾನೆ ಎನ್ನಲಾದ ವಿಡಿಯೋ ವೈರಲ್​ ಆಗುತ್ತಿತ್ತು. ಈಗಲೂ ಕೂಡ ಅಮೆರಿಕ ಬಾಗ್ದಾದಿ ಹತನಾಗಿದ್ದಾನೆ ಎಂದು ಹೇಳಿದ್ದರೂ ರಷ್ಯಾ ಒಪ್ಪುತ್ತಿಲ್ಲ.

ಸಿರಿಯಾದ ವಾಯವ್ಯ ಭಾಗದ ಇಡ್ಲಿಬ್​ ವಲಯದಲ್ಲಿ ಯುಎಸ್​ ದಾಳಿ ಸಂದರ್ಭ ಬಾಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸತ್ತಿದ್ದಾನೆ ಎಂಬ ವರದಿಗೆ ಸಂಬಂಧಪಟ್ಟಂತೆ ನಮ್ಮ ರಕ್ಷಣಾ ಸಚಿವಾಲಯಕ್ಕೆ ಯಾವುದೇ ನಂಬಲಾರ್ಹ ಮೂಲಗಳಿಂದ ಮಾಹಿತಿ ಬಂದಿಲ್ಲ ಎಂದು ರಷ್ಯಾ ರಕ್ಷಣಾ ಇಲಾಖೆ ವಕ್ತಾರ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!