ಯುಎಇ ಫೆಡರಲ್ ಕಾನೂನು ತಿದ್ದುಪಡಿ- ‘ದಯಾ ಧನ’ ಏಕೀಕರಣ

ದುಬೈ: ಯುಎಇಯಲ್ಲಿ ಫೆಡರಲ್ ಕಾನೂನಿಗೆ ತಿದ್ದುಪಡಿ ಮಾಡಲಾಗಿದ್ದು, ಇನ್ನು ಮುಂದೆ ಮಹಿಳೆಯರು ಅಪಘಾತದಲ್ಲಿ ಮರಣಹೊಂದಿದರೂ, ಕುಟುಂಬಕ್ಕೆ 2 ಲಕ್ಷ ದಿರ್ಹಂ ದಯಾ ಧನ ನೀಡಲಾಗುತ್ತದೆ. ಇಲ್ಲಿಯವರೆಗೆ, ಪುರುಷರು ಮೃತಪಟ್ಟರೆ ನೀಡುವ ದಯಾಧನದ ಅರ್ಧದಷ್ಟು ಮಾತ್ರ ಮಹಿಳೆ ಮೃತಪಟ್ಟಾಗ ಆಕೆಯ ಕುಟುಂಬಕ್ಕೆ ನೀಡಲಾಗುತ್ತಿದ್ದವು.

ರಸ್ತೆ ಅಪಘಾತ ಅಥವಾ ಕೊಲೆ ಸೇರಿದಂತೆ ಅಕಾಲಿಕ ಮರಣದ ಸಂದರ್ಭದಲ್ಲಿ, ಮೃತರ ಕುಟುಂಬಕ್ಕೆ ಆರೋಪಿಯು ‘ದಯಾಧನ’ ನೀಡಬೇಕು. ಈ ವರೆಗೆ ಪುರುಷರಿಗೆ 2ಲಕ್ಷ ದಿರ್ಹಮ್ ಮತ್ತು ಮಹಿಳೆಯರಿಗೆ 1ಲಕ್ಷ ದಿರ್ಹಂ ನೀಡಲಾಗುತ್ತಿತ್ತು. ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಅವರ ನಿರ್ದೇಶನದ ಮೇರೆಗೆ ಈ ಏಕೀಕರಣವನ್ನು ಜಾರಿಗೆ ತರಲಾಗಿದೆ. ಇದಲ್ಲದೆ, ಮೃತರ ಕುಟುಂಬ ಹೆಚ್ಚುವರಿ ಪರಿಹಾರಕ್ಕಾಗಿ ಪ್ರಕರಣ ಮುಂದುವರಿಸಿದರೆ, ತೀರ್ಪಿನ ಅನುಸಾರ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಸಮುದಾಯದಲ್ಲಿ ಮಹಿಳೆಯರಿಗೂ ಸಮಾನತೆ ಕಲ್ಪಿಸುವ ಭಾಗವಾಗಿ ಈ ತಿದ್ದುಪಡಿ ತರಲಾಗಿದೆ. ಇದು ಫೆಡರಲ್ ಕಾನೂನಾಗಿರುವುದರಿಂದ, ತಿದ್ದುಪಡಿಯು ಎಲ್ಲಾ ಎಮಿರೇಟ್‌ಗಳಲ್ಲಿ ಜಾರಿಗೆ ಬರಲಿದೆ. ಅದೇ ಸಮಯದಲ್ಲಿ, ಕಾನೂನು ತಜ್ಞರ ಪ್ರಕಾರ ಮೃತರೂ ಭಾಗಿಯಾಗಿರುವುದು ಕಂಡುಬಂದಲ್ಲಿ, ದಯಾಧನದ ಪ್ರಮಾಣದಲ್ಲಿ ಕಡಿತಗೊಳಿಸಲು ಅವಕಾಶ ಇದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!