ಕೆಸಿಎಫ್ ಅಲ್ ಹಸ್ಸಾ:ಮರ್ಹೂಂ ಅಬ್ದುಲ್ ರಹಿಮಾನ್ ಕೈರಂಗಳ ಅನುಸ್ಮರಣೆ

ದಮ್ಮಾಮ್: ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಎರಡು ವರ್ಷಗಳ ಹಿಂದೆ ನಮ್ಮಿಂದ ಇಹಲೋಕ ತ್ಯಜಿಸಿದ, ಅನಿವಾಸಿ ಕನ್ನಡಿಗರನ್ನು ಅಧ್ಯಾತ್ಮಿಕವಾಗಿಯೂ ಸಾಮಾಜಿಕವಾಗಿಯೂ ಮುನ್ನಡೆಸುವ ಸೌದಿ ಅರೇಬಿಯಾದಲ್ಲಿ ಸಂಘಟಿಸಿದ GKSF ಎಂಬ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಗೈದು ಬಳಿಕ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕೆ.ಸಿ.ಎಫ್ ಗೆ ಬೇಕಾಗಿ ಅಹೋರಾತ್ರಿ ಕಾರ್ಯಾಚರಣಾ ನಡೆಸಿದ ಮರ್ಹೂಂ ಅಬ್ದುಲ್ ರಹಿಮಾನ್ ಕೈರಂಗಳ ಅವರ ದ್ವೀತಿಯ ಅನುಸ್ಮರಣ ಸಂಗಮವು ಹುಫೂಫ್ ಸಅದಿಯಾ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಅನುಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ಅಧ್ಯಕ್ಷರಾದ ಹಬೀಬ್ ಮರ್ದಾಳ ವಹಿಸಿದರು, ಮುಖ್ಯ ಅಥಿತಿ ಯಾಗಿ ಭಾಗವಹಿಸಿದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ಚೇರ್ ಮ್ಯಾನ್ ಬಾಷಾ ಗಂಗಾವಳ್ಳಿ ಮಾತಾನಾಡಿ ಹೇಗೋ ಇದ್ದ ತನ್ನ ಜೀವನವನ್ನು ಆಧ್ಯಾತ್ಮಿಕತೆಯ ಜೀವನವಾಗಿ ಮಾರ್ಪಾಡಿಸುವಲ್ಲಿ ಕೆ.ಸಿ.ಎಫ್ ಮಹತ್ವದ ಪಾತ್ರವನ್ನು ವಹಿಸಿದೆ, ಎಂದು ಬದಲಾವಣೆಯಾದ ತನ್ನ ಜೀವನವನ್ನು ವಿವರಿಸಿದರು.

ಅನುಸ್ಮರಣ ಮುಖ್ಯ ಪ್ರಭಾಷಣಕ್ಕಾಗಿ ಆಗಮಿಸಿದ ಕೆ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಿ.ಪಿ.ಯುಸುಫ್ ಸಖಾಫಿ ಬೈತಾರ್ ರವರು ಅಬ್ದುಲ್ ರಹಿಮಾನ್ ಕೈರಂಗಳ ರವರ ಸಂಘಟನೆಯ ಕಾರ್ಯಚರಣಾ ಬಗ್ಗೆ ವಿವರಿಸಿ ಕೆ.ಸಿ.ಎಫ್ ಸಂಘಟನೆಯಲ್ಲಿ ಕಾರ್ಯಚರಣೆ ನಡೆಸಿದರೆ ಅದು ಅಲ್ಲಾಹನ ಅವುಳಿಯಾಗಳಿಗೆ ಖಿದ್ಮತ್ ಮಾಡಿದ ಹಾಗೆ, ಕೆ.ಸಿ.ಎಫ್ ಸಂಘಟನೆಗೆ ಅಲ್ಲಾಹನ ಹಾಗೂ ಅಲ್ಲಾಹನ ಅವುಲಿಯಾಗಳ ರಕ್ಷೆ ಇದೆ ಇಂತಹ ಮಹತ್ವದ ಸಂಘಟನೆಯೊಂದಿಗೆ ನಂಟು ಬೆಳೆಸಿದರಿಂದಲೇ ಅಬ್ದುಲ್ ರಹಿಮಾನ್ ಕೈರಂಗಳ ರವರು ಇದೀಗ ಜನಮನದಲ್ಲಿ ಸ್ಥಾನ ಪಡೆದಿರುವುದು ಎಂದು ಸವಿಸ್ತಾರವಾಗಿ ವಿವರಿಸಿದರು .

ವೇದಿಕೆಯಲ್ಲಿ ಕೆ.ಸಿ.ಎಫ್ ಸೌದಿ ಅರೇಬಿಯಾ ಇಹ್ಸಾನ್ ದಾಹಿ ಉಮರುಲ್ ಫಾರೂಕ್ ಬಾ ಅಹ್ಸನಿ ಮೊಂಟೆಪದವು, ಚೇರೂರು ಅಮಾನಿ ಉಸ್ತಾದ್, ಕೆಸಿಎಫ್ ರಾಷ್ಟ್ರೀಯ ಪಬ್ಲಿಷಿಂಗ್ ವಿಂಗ್ ಕಾರ್ಯದರ್ಶಿ ಅಶ್ರು ಬಜ್ಪೆ, ದಮ್ಮಾಮ್ ಝೋನ್ ಪಬ್ಲಿಷಿಂಗ್ ವಿಂಗ್ ಕಾರ್ಯದರ್ಶಿ ಇಕ್ಬಾಲ್ ಗುಲ್ವಾಡಿ, ಕೆ. ಸಿ.ಎ ಫ್ ಅಲ್ ಹಸ್ಸಾ ಸೆಕ್ಟರ್ ಕೋಶಾಧಿಕಾರಿ YK ಸುಲೈಮಾನ್ ಇಂದ್ರಾಜೆ ಉಪಸ್ಥಿತಿಯಿದ್ದರು.

ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ಅಸ್ಸುಫ್ಪಾ ಟ್ಯೂಟರ್ ಇಬ್ರಾಹಿಂ ಸ ಅದಿ ಮಚ್ಚಂಪಾಡಿ ಸ್ವಾಗತಿಸಿ, ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಕಾಜೂರು ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಅಶ್ರಫ್ ಕಟ್ಟದಪಡ್ಪು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!