ಕರ್ನಾಟಕ ಮುಸ್ಲಿಂ ಜಮಾಅತ್ ಶಿವಮೊಗ್ಗ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ಶಿವಮೊಗ್ಗ : ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಶಿವಮೊಗ್ಗ ಜಿಲ್ಲಾ ಸಮಿತಿಯ ಘೋಷಣಾ ಸಮಾವೇಶವು ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ತೀರ್ಥಹಳ್ಳಿಯವರ ದುಅ ದೊಂದಿಗೆ ಎಸ್ ಜೆ ಹಾಲ್ ನಲ್ಲಿ ಪ್ರಾರಂಭಗೊಂಡಿತು ರಾಜ್ಯ ಉಪಾಧ್ಯಕ್ಷರಾದ ಜನಾಬ್ ಇಕ್ಬಾಲ್ ಸೇಠ್ ರವರ ಅಧ್ಯತೆಯಲ್ಲಿ ನಡೆದ ಸಮಾವೇಶವನ್ನು ಮೌಲಾನಾ ಆಖಿಲ್ ರಝಾ ಮಿಸ್ಬಾಹಿ ಉಧ್ಘಾಟಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು , ಜನಾಬ್ ಹಬೀಬ್ ಕೋಯ ಮುಸ್ಲಿಂ ಜಮಾಅತ್ ನ ರೂಪು ರೇಶೆಯ ಬಗ್ಗೆ ವಿಷಯ ಮಂಡಿಸಿದರು ಅಸ್ಸಯ್ಯಿದ್ ಹಾರೂನ್ ತಂಙಳ್ ಭಧ್ರಾವತಿ, ಅಸ್ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ತೀರ್ಥಹಳ್ಳಿ ,ಜಿಲ್ಲಾ ಮುಅಲ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಅದಿ,ಮೌಲಾನಾ ಹಾಶಿಂ ಮಿಸ್ಬಾಹಿ
ರಾಜ್ಯ ಉಪಾಧ್ಯಕ್ಷರಾದ ಹಾಜಿ ಮುಹಮ್ಮದ್ ಸಾಗರ , ರಾಜ್ಯ ಕಾರ್ಯದರ್ಶಿ ಯಹ್ಕೂಬ್ ಯೂಸುಫ್ ಹೊಸನಗರ,ರಾಜ್ಯ ಸದಸ್ಯರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಬ್ದುರ್ರಹ್ಮಾನ್ ನ್ಯಾಷನಲ್,ಸಿ.ಎಮ್ ಅಬ್ದುಲ್ ಖಾದರ್ ಭಧ್ರಾವತಿ, ಜನಾಬ್ ಸಮೀವುಲ್ಲ,ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಮದನಿ,ಎಸ್ ಡಿ ಐ ಜಿಲ್ಲಾ ನಾಯಕ ನೂರುಲ್ ಹಖ್ ರಝ್ವಿ, ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಹಂಝ ಕೋಯ ಹಾಗೂ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಜಿಲ್ಲಾ ಮುಸ್ಲಿಂ ಜಮಾಅತ್ ಗೆ ಈ ಕೆಳಗಿನ ವರನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ
ಜನಾಬ್ ಕಲೀಮ್ ಪಾಷಾ ಶಿವಮೊಗ್ಗ., ಪ್ರಧಾನ ಕಾರ್ಯದರ್ಶಿಯಾಗಿ
ಅಬ್ದುರ್ರಹ್ಮಾನ್ ನ್ಯಾಷನಲ್ ತೀರ್ಥಹಳ್ಳಿ, ಕೋಶಾಧಿಕಾರಿಯಾಗಿ ಹಾಜಿ ಇಕ್ಬಾಲ್ ಸಾಬ್ ಸಾಗರ,
ಸಂಘಟನಾ ಕಾರ್ಯದರ್ಶಿಯಾಗಿ ಮೌಲಾನಾ ಶಾಹುಲ್ ಹಮೀದ್ ನಗರ, ಉಪಾಧ್ಯಕ್ಷರುಗಳಾಗಿ ಅಸ್ಸಯ್ಯಿದ್ ಹಾರೂನ್ ತಂಙಳ್ ,ಅಹ್ಮದ್ ಬಾವ ಕೋಣಂದೂರು, ಜಲೀಲ್ ಜಯನಗರ ಸಿ.ಎಮ್ ಖಾದರ್ ಭಧ್ರಾವತಿ, ಸಿರಾಜ್ ಸಾಬ್ ಸಿರಾಲ್ ಕೊಪ್ಪ, ಅಮೀರ್ ಹಂಝ ರಿಪ್ಪನ್ ಪೇಟೆ
ಕಾರ್ಯಾದರ್ಶಿಗಳಾಗಿ ಅಬ್ದುರ್ರಹೀಮ್ ಎನ್ ಕೆ, ಮನ್ಸೂರು ಕೋಟಗದ್ದೆ,ತಷ್ರೀಫ್ ಸಾಗರ,ಡಾ ಅಬೂಬಕ್ಕರ್ ರಿಪ್ಪನ್ ಪೇಟೆ ಕಾಸಿಂ ಸಾಬ್ ಸಾಗರ,ಹರೀಶುಲ್ಲ ಖಾನ್ ಶಿವಮೊಗ್ಗ ಹಾಗೂ ಜಿಲ್ಲೆಗೊಳಪಟ್ಟ ಏಳು ತಾಲೂಕು ನಿಂದ ಪ್ರಮುಖರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.

ಶಾಹುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿ ನಿರೂಪಿಸಿ ನೂತನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ನ್ಯಾಷನಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!