ಯುಎಇಯಲ್ಲಿ “Rupay” ಕಾರ್ಡ್‌- ಭಾರೀ ರಿಯಾಯ್ತಿ ಘೋಷಣೆ

ದುಬೈ: ಯುಎಇಯಲ್ಲಿ ಭಾರತದ ರೂಪೇ ಕಾರ್ಡ್‌ಗೆ ಅನುಮೋದನೆ ಲಭಿಸಿದ್ದು, ಪ್ರಾಯೋಗಿಕ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಕಾರ್ಡ್ ಮೂಲಕ ಖರೀದಿಸುವವರಿಗೆ ಉತ್ತಮ ಲಾಭ ಲಭ್ಯವಾಗಲಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ. ಇದು ದ್ವಿಪಕ್ಷೀಯ ಸಂಬಂಧದ ಪ್ರಬಲ ಹೆಜ್ಜೆ ಎಂದು ಕೇಂದ್ರ ವಿವರಿಸಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಭೇಟಿ ಸಂದರ್ಭದಲ್ಲಿ ಯುಎಇಯಲ್ಲಿ ರೂಪೇ ಕಾರ್ಡ್‌ಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿತ್ತು.

ಆಯ್ದ ವಾಣಿಜ್ಯ ಸಂಸ್ಥೆಗಳಿಂದ ಖರೀದಿಸಿದ ಉತ್ಪನ್ನಗಳಿಗೆ ಉತ್ತಮ ರಿಯಾಯಿತಿಯನ್ನು ನೀಡುವುದಾಗಿ ರಾಷ್ಟ್ರೀಯ ಪಾವತಿ ನಿಗಮ ದುಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ವಿಶ್ವ ಎಕ್ಸ್‌ಪೋ ಮತ್ತು ದುಬೈ ವ್ಯಾಪಾರ ಮೇಳದಲ್ಲಿ ಹೆಚ್ಚಿನ ರಿಯಾಯಿತಿಗಳು ಲಭ್ಯವಾಗಲಿದೆ.

ಭಾರತದಲ್ಲಿ ಈಗಾಗಲೇ 60 ಕೋಟಿ ರೂಪೇ ಕಾರ್ಡ್‌ಗಳನ್ನು ಹಂಚಲಾಗಿದೆ. ಯುಎಇಗೆ ಬರುವ ಭಾರತೀಯರು ಈ ಕಾರ್ಡ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು ಎಂದು ಹೇಳಲಾಗಿದೆ.

ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ ಬಹು ಬ್ಯಾಂಕ್ ಖಾತೆಗಳನ್ನು ಸಂಪರ್ಕ ಗೊಳಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಎನ್‌ಪಿಸಿಐ ಮುಖ್ಯ ಕಾರ್ಯಾಚರಣಾ ಅಧಿಕಾರಿ ಪ್ರವೀನಾ ರೈ ಮತ್ತು ಮುಖ್ಯ ಡಿಜಿಟಲ್ ಅಧಿಕಾರಿ ಆರಿಫ್ ಖಾನ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!