ಸೌದಿ: ಸಂದರ್ಶಕ ವೀಸಾ ದರ ಇಳಿಕೆಯಿಂದಾಗಿ ಪ್ರವಾಸೋದ್ಯಮದಲ್ಲಿ ಪ್ರಗತಿ

ರಿಯಾದ್: ಸೌದಿ ಸರಕಾರವು ಸಂದರ್ಶಕ ವೀಸಾ ದರವನ್ನು ಗಣನೀಯವಾಗಿ ಇಳಿಸಿರುವ ಮೂಲಕ ಪ್ರವಾಸೋದ್ಯಮ ವಲಯದಲ್ಲಿ ಪ್ರಗತಿ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಡಿಸೆಂಬರ್ ಗೆ ಮುಂಚಿತವಾಗಿ ಎಲ್ಲಾ ದೇಶಗಳಿಗೂ ಸೌದಿ ಅರೇಬಿಯಾಕೆ ಸಂದರ್ಶಕ ವೀಸಾಗಳನ್ನು ನೀಡಲಾಗುವುದು. ಪ್ರವಾಸೋದ್ಯಮದ ಮೂಲಕ ದೇಶವು ಆರ್ಥಿಕತೆಯಲ್ಲಿ ದೊಡ್ಡ ಉತ್ತೇಜನವನ್ನು ನಿರೀಕ್ಷಿಸುತ್ತಿದೆ. ಒಂದು ವರ್ಷದ ಅವಧಿಗೆ ಬಹು ಪ್ರವೇಶ ವೀಸಾಗಳಿಗೆ ಸಾವಿರ ರಿಯಾಲ್‌ಗಳಿಗಿಂತ ಹೆಚ್ಚು ವೆಚ್ಚವಾಗುತ್ತಿತ್ತು, ಪ್ರಸ್ತುತ ಮುನ್ನೂರು ರಿಯಾಲ್‌ಗೆ ವಿಸಾ ಪಡೆದು ಟಿಕೆಟ್ ಪಡೆದು ಸೌದಿ ಅರೇಬಿಯಾಕ್ಕೆ ತೆರಳಬಹುದಾಗಿದೆ.

ವ್ಯಾಪಾರ ವೀಸಾ ಮತ್ತು ಪ್ರವಾಸೋದ್ಯಮ ವೀಸಾಗಳ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ವಿಶೇಷ ಕಾರ್ಯಕ್ರಮಗಳಿಗಾಗಿ ಪ್ರಸ್ತುತ ವೀಸಾಗಳನ್ನು ಅನುಮತಿಸಲಾಗಿದ್ದು, ಇದಲ್ಲದೆ, ಪ್ರವಾಸಿ ವೀಸಾಗಳನ್ನು ಕೂಡ ನೀಡಲಾಗುತ್ತಿದೆ. 51 ದೇಶಗಳಿಗೆ ಮೊದಲ ಹಂತದಲ್ಲಿ ವೀಸಾ ಲಭಿಸಲಿದೆ. ಈ ಪಟ್ಟಿಯಲ್ಲಿ ಭಾರತವಿಲ್ಲ. ಆದರೆ ಡಿಸೆಂಬರ್ ವೇಳೆಗೆ ಎಲ್ಲಾ ದೇಶಗಳಿಗೂ ಪ್ರವಾಸಿ ವೀಸಾ ನೀಡಲಾಗುವ ಮೂಲಕ ಸೌದಿಗೆ ಪ್ರಯಾಣ ಸುಲಭವಾಗಲಿದೆ.

ಸಂಬಂಧಿಕರನ್ನು ಭೇಟಿ ಮಾಡುವವರಿಗೆ ವೀಸಾ ದರ ಕಡಿಮೆ ಇರುವುದು ಆಶಾದಾಯವಾಗಲಿದೆ. ಹೊಸ ನಿರ್ಧಾರವು ಕುಟುಂಬ ವೀಸಾ ಹೊಂದದವರಿಗೂ ಪ್ರಯೋಜನ ನೀಡಲಿದೆ.

Leave a Reply

Your email address will not be published. Required fields are marked *

error: Content is protected !!