ಅಬುಧಾಬಿ ಟೋಲ್: ನೋಂದಣೆ ಉಚಿತ- ಅ.15 ರ ಬಳಿಕ 100 ದಿರ್ಹಮ್

ಅಬುಧಾಬಿ: ಅಬುಧಾಬಿಯ ಕಾರು ಮಾಲೀಕರು ಈಗ ತಮ್ಮ ವಾಹನಗಳನ್ನು ವ್ಯವಸ್ಥೆಗೆ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಯನ್ನು ಡಿ.ಒ.ಟಿ. ವೆಬ್‌ಸೈಟ್ ಮೂಲಕ ಅಥವಾ ಯಾವುದೇ ಅಬುಧಾಬಿ ಸರ್ಕಾರಿ ಸೇವಾ ಕೇಂದ್ರ (ಐಟಿಸಿ) ಮೂಲಕ ನೋಂದಾಯಿಸಬಹುದು ಎಂದು ಸಾರಿಗೆ ಇಲಾಖೆ (ಇಂಟರ್ಗ್ರೇಡ್ ಟ್ರಾನ್ಪೋರ್ಟ್ ಸೆಂಟರ್) ತಿಳಿಸಿದೆ.

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಸಾರಿಗೆ ಕ್ಷೇತ್ರದ ದಕ್ಷತೆಯನ್ನು ಸುಧಾರಿಸಲು ಅಬುಧಾಬಿಯ ಮುಖ್ಯ ಸೇತುವೆಗಳಾದ ಶೈಖ್ ಝಾಯಿದ್ ಸೇತುವೆ, ಶೈಖ್ ಖಲೀಫಾ ಬಿನ್ ಝಾಹಿದ್ ಸೇತುವೆ, ಅಲ್ ಮಕ್ತಾ ಸೇತುವೆ ಮತ್ತು ಮುಸ್ಸಫಾ ಸೇತುವೆಗಳಲ್ಲಿ ಟೋಲ್ ಗೇಟ್‌ಗಳನ್ನು ಸ್ಥಾಪಿಸಲಾಗಿದೆ. ನೋಂದಣಿ ಪ್ರಕ್ರಿಯೆಯ ಮುಂದಿನ ಹಂತವು ಕಂಪನಿಯ ವಾಹನಗಳನ್ನು ಒಳಗೊಂಡಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಈ ಬಗ್ಗೆ ಘೋಷಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಅಬುಧಾಬಿಗೆ ಹೋಗುವ ರಸ್ತೆಗಳನ್ನು ಬಳಸಲು ಬಯಸುವ ಎಲ್ಲರಿಗೂ ಟೋಲ್ ಸಿಸ್ಟಮ್ ನೋಂದಣಿ ಕಡ್ಡಾಯವಾಗಿದೆ. ಡಿ.ಒ.ಟಿ. ವೆಬ್‌ಸೈಟ್ https://www.dot.abudhabi.ae/en/ ನಲ್ಲಿ ಎಮಿರೇಟ್ಸ್ ಐಡಿ ಬಳಸಿ ನೋಂದಣಿ ಪೂರ್ಣಗೊಳಿಸಬಹುದು. ಅಬುಧಾಬಿ ಎಮಿರೇಟ್ಸ್‌ನಲ್ಲಿ 2019 ರ ಅಕ್ಟೋಬರ್ 15 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳ ನೋಂದಣಿ ಉಚಿತವಾಗಿದೆ. ಖಾತೆ ವಿವರಗಳ ಜೊತೆಗೆ, ಬಳಕೆದಾರರು ಅಬುಧಾಬಿ ಪೊಲೀಸರಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಲ್ಲಿ ಸಂದೇಶವನ್ನು ಸ್ವೀಕರಿಸುತ್ತಾರೆ.

ಅಕ್ಟೋಬರ್ 15, 2019 ರ ನಂತರ ನೋಂದಾಯಿಸಲಾದ ವಾಹನಗಳು 100 ದಿರ್ಹಂ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇತರ ಎಮಿರೇಟ್‌ಗಳಲ್ಲಿ ನೋಂದಾಯಿತ ಕಾರುಗಳ ಬಳಕೆದಾರರು ಟೋಲ್ ಗೇಟ್‌ಗಳನ್ನು ಪ್ರವೇಶಿಸಲು ಪ್ರತಿ ವಾಹನಕ್ಕೆ 100 ದಿರ್ಹಮ್, ನೋಂದಣಿ ಶುಲ್ಕ 50 ದಿರ್ಹಂ. ಮತ್ತು ಖಾತೆಗೆ ಕ್ರೆಡಿಟ್ ಮಾಡಲು 100 ದಿರ್ಹಂ ಪಾವತಿಸಬೇಕು. ಟೋಲ್ ಗೇಟ್‌ಗಳನ್ನು ದಾಟಿದ ನೋಂದಾಯಿಸದ ವಾಹನಗಳಿಗೆ ನೋಂದಣಿಗೆ ಹತ್ತು ದಿನಗಳ ಗ್ರೇಸ್ ಅವಧಿ ನೀಡಲಾಗುವುದು, ನಂತರ ಅವರಿಗೆ ವಿಳಂಬಿಸುವ ದಿನವೊಂದಕ್ಕೆ 100 ದಿರ್ಹಂ ಅಂತೆ ದಂಡ ವಿಧಿಸಲಾಗುವುದು, ಇದು ಗರಿಷ್ಠ 10,000 ದಿರ್ಹಂ ವರೆಗೂ ತಲುಪಲಿದೆ.

Leave a Reply

Your email address will not be published. Required fields are marked *

error: Content is protected !!