ಜಿದ್ದಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿ, ಜನರ ಅಭಿವ್ಯಕ್ತಿಯನ್ನು ಪರಿಗಣಿಸುವಂತೆ ಸೌದಿ ಅರೇಬಿಯಾ ಕರೆ ನೀಡಿದೆ.
ಹೊಸ ಪರಿಸ್ಥಿತಿಯನ್ನು ಸೌದಿ ಅರೇಬಿಯಾ ಗಮನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆತಂಕವನ್ನೂ ಅದು ವ್ಯಕ್ತಪಡಿಸಿದೆ.
ಅಂತರರಾಷ್ಟ್ರೀಯ ನಿರ್ಣಯಗಳ ಅನುಸಾರ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಸೌದಿ ಅರೇಬಿಯಾದ ಅಧಿಕೃತ ವಾರ್ತಾ ಏಜೆನ್ಸಿಯಾದ ಎಸ್ಪಿಐ ವರದಿ ಮಾಡಿದೆ.