ಮಕ್ಕಳಿಗೆ ಉಚಿತ ವೀಸಾ: ಕುಟುಂಬ ಸಂದರ್ಶಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ದುಬೈ: ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ವಿಸಾ ಅನುಮತಿಸಲಾದ ಹಿನ್ನಲೆಯಲ್ಲಿ ಹೆಚ್ಚಿನ ಕುಟುಂಬಗಳು ಯುಎಇ ಸಂದರ್ಶನಕ್ಕಾಗಿ ತಲುಪುತ್ತಿರುವುದಾಗಿ ಅಂಕಿಅಂಶಗಳು ವ್ಯಕ್ತಪಡಿಸುತ್ತಿದೆ.

ಜುಲೈ 15ರಿಂದ ಸೆಪ್ಟೆಂಬರ್ 15ರ ವರೆಗೆ ಪೋಷಕರೊಂದಿಗೆ ಯುಎಇ ಸಂದರ್ಶಿಸುವ ಮಕ್ಕಳಿಗೆ ವಿಸಾ ಉಚಿತವಾಗಿ ಲಭ್ಯವಾಗಲಿದೆ.

ಬೇಸಿಗೆ ಕಾಲದ ಉಡುಗೋರೆಯಾಗಿ ಯುಎಇ ನೀಡಿದ ವಿನಾಯಿತಿಯ ಪ್ರಯೋಜನವನ್ನು ಪಡೆದು ಹಲವಾರು ಕುಟುಂಬಗಳು ಯುಎಇಗೆ ತಲುಪಿದೆ. ಯುಎಇಯಲ್ಲಿರುವ ವಿವಿಧ ದೇಶೀಯರಾದ ಅನಿವಾಸಿಗರ ಕುಟುಂಬಗಳು, ವಿವಿಧ ಕಡೆಗಳ ವಿನೋದ ಯಾತ್ರಿಕರು ಈ ವಾಗ್ದಾನದ ಪ್ರಯೋಜನ ಪಡೆದು ಯುಎಇಗೆ ಅತಿಥಿಗಳಾಗಿ ತಲುಪಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!