ರಿಯಾದ್: ಸೌದಿಯಲ್ಲಿ ಇಡೀ ದಿನ ಅಂಗಡಿಗಳನ್ನು ತೆರೆದಿಡಲು ನೀಡಬೇಕಾಗುವ ದರದಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ದೊರಯಲಿದ್ದು, ಪೆಟ್ರೋಲ್ ಪಂಪ್, ಮೆಡಿಕಲ್ ಶಾಪ್ ಮುಂತಾದ ಅವಶ್ಯ ಸೇವೆಗಳಿಗೆ ವಿನಾಯಿತಿ ಲಭ್ಯವಾಗಲಿದೆ.
ಮುನ್ಸಿಪಲ್ ಖಾತೆ ಸಚಿವಾಲಯದ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಇಪ್ಪತ್ತನಾಲ್ಕು ಗಂಟೆಯೂ ತೆರದು ಕಾರ್ಯಾಚರಿಸುವುದಕ್ಕೆ ಸಚಿವಾಲಯ ಅನುಮೋದನೆ ನೀಡಿತ್ತು. ಅಕ್ಟೋಬರ್ ತಿಂಗಳಿನಿಂದ ಈ ನಿಯಮ ಜಾರಿಯಾಗಲಿದೆ.
ದಿನ ಪೂರ್ತಿ ಅಂಗಡಿಗಳನ್ನು ತೆರೆದಿಡಲು ಸಂಸ್ಥೆಯ ಸಾಮರ್ಥ್ಯಾನುಸಾರ ಒಂದು ಲಕ್ಷ ರಿಯಾಲ್ ವರೆಗೆ ವಾರ್ಷಿಕ ದರ ನಿಗದಿಪಡಿಸಬಹುದಾಗಿದೆ. ದರ ಪಡೆಯದೆ ಕಾರ್ಯಾಚರಣೆ ಮಾಡಬಹುದಾದ ಸಂಸ್ಥೆಗಳ ಬಗ್ಗೆ ಮಾಹಿತಿ ಕಲೆಹಾಕಲು ಮುನಿಸಿಪಲ್ ಗ್ರಾಮಾಭಿವೃದ್ದಿ ಸಚಿವಾಲಯವನ್ನು ವಹಿಸಲಾಗಿತ್ತು. ಇದರ ಅನುಸಾರವಾಗಿ ಪೆಟ್ರೋಲ್ ಪಂಪ್ 24 ಗಂಟೆಯೂ ಕಾರ್ಯಾಚರಿಸಲು ಯಾವುದೇ ದರ ಪಾವತಿಸಬೇಕಾಗಿಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್, ಸಮಾಜಸೇವಾ ಸಂಸ್ಥೆಗಳೂ ದರ ಪಾವತಿಸಬೇಕಾಗಿಲ್ಲ.
ಉತ್ತರ ವಲಯ ಮುನಿಸಿಪಲ್ ಅಸಿಸ್ಟೆಂಟ್ ಅಂಡರ್ ಸೆಕ್ರೆಟರಿ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಪೆಟ್ರೋಲ್ ಪಂಪ್‌ಗಳಲ್ಲಿ ಕಾರ್ಯಾಚರಿಸುವ ಇತರ ಅಂಗಡಿಗಳ ಬಗ್ಗೆ ಸಚಿವಾಲಯದ ಮುಂದಿನ ತೀರ್ಮಾನದ ವರೆಗೆ ಕಾಯಬೇಕಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ