ದುಬೈ: ಭಾರತೀಯ ವಿಮಾನ ಕಂಪೆನಿ ಏರ್ ವಿಸ್ತಾರವು ದುಬೈ ಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಮುಂಬೈನಿಂದ ಆಗಸ್ಟ್ 21ರಿಂದ ಅದು ಸೇವೆ ಪ್ರಾರಂಭಿಸಲಿದ್ದು, ದುಬೈ-ಮುಂಬೈ ನಡುವೆ ಪ್ರತಿದಿನ ಹಾರಾಟ ನಡೆಸಲಿದೆ.
ಇದು ಏರ್ ವಿಸ್ತಾರದ ಎರಡನೇ ಅಂತರ್ರಾಷ್ಟ್ರೀಯ ಹಾರಾಟವಾಗಿದ್ದು, ಪ್ರತಿದಿನ ಸಂಜೆ 4:25ಕ್ಕೆ ಮುಂಬೈಯಿಂದ ಹೊರಡುವ ವಿಮಾನವು ಯುಎಇ ಸಮಯ 6:15ಕ್ಕೆ ದುಬೈ ತಲುಪಲಿದೆ. ರಾತ್ರಿ 7:15ಕ್ಕೆ ದುಬೈಯಿಂದ ಹೊರಟು, ರಾತ್ರಿ 12:15 ಕ್ಕೆ ಮುಂಬೈ ತಲುಪಲಿದೆ. ಉದ್ಘಾಟನೆ ಪ್ರಯುಕ್ತ ದುಬೈಗೆ ಹೋಗಿ ಮರಳುವ(ಟು ವೇ) ಎಕಾನಮಿಕ್ ಟಿಕೆಟ್ 17,820 ರೂ.ಗೆ ವಿನಾಯಿತಿ ದರದಲ್ಲಿ ದೊರೆಯಲಿದೆ.
ಕಳೆದ ತಿಂಗಳು ಏರ್ ವಿಸ್ತಾರವು ತನ್ನ ಪ್ರಥಮ ಅಂತರ್ರಾಷ್ಟ್ರೀಯ ಹಾರಾಟವನ್ನು ಸಿಂಗಾಪುರಕ್ಕೆ ಪ್ರಾರಂಭಿಸಿತ್ತು. ಸಿಂಗಾಪುರ್ ಏರ್ಲೈನ್ಸ್ ಮತ್ತು ಟಾಟಾ ಸಹಯೋಗದೊಂದಿಗೆ ಪ್ರಾರಂಭಗೊಂಡ ಏರ್ ವಿಸ್ತಾರ ಮೂರು ವರ್ಷದಿಂದ ಭಾರತದಾದ್ಯಂತ ಹಾರಾಟ ನಿರತವಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ