janadhvani

Kannada Online News Paper

ಬಹ್ರೈನ್: ರೆಸಿಡೆನ್ಸಿಯಲ್ ಏರಿಯಾಗಳಿಂದ ಬ್ಯಾಚುಲರ್‌ಗಳ ಸ್ಥಳಾಂತರಕ್ಕೆ ಪ್ರಧಾನಿ ಆದೇಶ

ಮನಾಮ: ದೇಶದಲ್ಲಿ ಸ್ವದೇಶೀಯರು ವಾಸವಿರುವ ಪ್ರದೇಶಗಳಲ್ಲಿ ಬ್ಯಾಚುಲರ್‌ಗಳ ವಾಸವನ್ನು ಉಪೇಕ್ಷಿಸಲು ಕ್ಯಾಬಿನೆಟ್ ತೀರ್ಮಾನಿಸಿದ್ದು, ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಬ್ಯಾಚುಲರ್‌ಗಳಾದ ಕಾರ್ಮಿಕರ ನಿವಾಸಗಳನ್ನು ಕೆಲವು ರೆಸಿಡೆನ್ಸಿಯಲ್ ಏರಿಯಾಗಳಿಂದ ಸ್ಥಳಾಂತರ ಮಾಡುವಂತೆ ಪ್ರಧಾನಮಂತ್ರಿ ಪ್ರಿನ್ಸ್ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಗೃಹ ಸಚಿವಾಲಯ, ಸಾರ್ವಜನಿಕ ಸಚಿವಾಲಯ, ಮುನಿಸಿಪಲ್- ನಗರಾಭಿವೃದ್ಧಿ ಸಚಿವಾಲಯಗಳ ಸಹಕಾರದೊಂದಿಗೆ ಕಾರ್ಯಗತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಶಿಥಿಲಗೊಂಡು ವಾಸಯೋಗ್ಯವಲ್ಲದ ಕಟ್ಟಡಗಳ ವಾಸವನ್ನು ಉಪೇಕ್ಷಿಸಲು ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಕಟ್ಟಡಗಳಲ್ಲಿ ಸಾಮಾಜಿಕ ಸುರಕ್ಷೆಗೆ ಅಪಾಯ ಉಂಟುಮಾಡಬಲ್ಲ ಕಾರ್ಯಗಳನ್ನು ಕೊನೆಗೊಳಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಮೀನು ಹಿಡಿಯಲು ತಪ್ಪಾದ ರೀತಿಯನ್ನು ಅನುಸರಿಸುವುದರ ವಿರುದ್ದ ನಿಷೇಧ ಏರ್ಪಡಿಸಲು ಸಚಿವಾಲಯ ತೀರ್ಮಾನ ಕೈಗೊಂಡಿದೆ.

ಸಿಗಡಿ ಹಿಡಿಯುವುದಕ್ಕೆ ಅನುಮತಿ ಲಭಿಸಿರುವವರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಕಾನೂನು ಜಾರಿಯಾಗಲಿದೆ. ನಿಶೇಧಿತ ಬಲೆಗಳ ಮೂಲಕ ಸೀಗಡಿ ಹಿಡಿಯುವುದರ ಮೂಲಕ ಮತ್ಸ್ಯ ಸಂಪತ್ತಿನ ಉತ್ಪಾದನೆ ಕಡಿಮೆಯಾಗಬಹುದು ಎನ್ನುವ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಸಚಿವಾಲಯಕ್ಕೆ ವಹಿಸಲಾಗಿದೆ.